ಕಾರ್ಕಳ ತಾಲೂಕಿನೆಲ್ಲೆಡೆ ಮಳೆ – ಪಳ್ಳಿ ಕ್ರಾಸ್‌ನಲ್ಲಿ ಮರದ ಗೆಲ್ಲು ಬಿದ್ದು ವಾಹನಗಳಿಗೆ ಹಾನಿ

ಕಾರ್ಕಳ : ಸೋಮವಾರ ಕಾರ್ಕಳ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದಿದೆ. ಪರಿಣಾಮವಾಗಿ ವಿವಿಧೆಡೆ ಹಾನಿಯೂ ಸಂಭವಿಸಿದೆ. ಬೈಲೂರು ಪಳ್ಳಿ ಕ್ರಾಸ್‌ನಲ್ಲಿ ಮರದ ಗೆಲ್ಲು ಮುರಿದು ಬಿದ್ದು ಮರದಡಿಯಲ್ಲಿದ್ದ ಹಲವು ವಾಹನಗಳಿಗೆ ಹಾನಿಯಾಗಿದೆ. ಕಣಜಾರು ಗ್ರಾಮದ ಗುರಿಮಜಲ್‌ ಎಂಬಲ್ಲಿ ಗಾಳಿ ಮಳೆಗೆ ಕೊಟ್ಟಿಗೆಯೊಂದು ಹಾನಿಗೀಡಾಗಿದೆ. ಇನ್ನಾ ಗ್ರಾಮದ ಹರೀಶ್ ಕೋಟ್ಯಾನ್ ಅವರ ಕಟ್ಟಡಕ್ಕೆ ಮರ ಬಿದ್ದು ತಗಡು ಶೀಟ್‌ಗಳು ಮುರಿದಿದೆ.

ಕಣಜಾರು

ಮಳೆ ಪ್ರಮಾಣ (ಜೂ. 17)
ಕಾರ್ಕಳ – 65.2 ಮಿ. ಮೀ., ಇರ್ವತ್ತೂರು- 97.6 ಮಿ.ಮೀ., ಅಜೆಕಾರು – 69.8 ಮಿ.ಮೀ., ಸಾಣೂರು – 87.8 ಮಿ. ಮೀ., ಕೆದಿಂಜೆ – 45.4 ಮಿ. ಮೀ., ಮುಳಿಕಾರು – 142.6 ಮಿ. ಮೀ. ಮತ್ತು ಕೆರ್ವಾಶೆಯಲ್ಲಿ – 90 ಮಿ. ಮೀ. ಮಳೆಯಾಗಿದ್ದು, ಒಟ್ಟಾರೆಯಾಗಿ ತಾಲೂಕಿನಾದ್ಯಂತ 85.48 ಮಿ. ಮೀ. ಸರಾಸರಿ ಮಳೆಯಾಗಿದೆ.

ಇನ್ನಾದಲ್ಲಿ ಕಟ್ಟಡದ ಮೇಲೆ ಮರ ಬಿದ್ದು ಹಾನಿ




























































































































error: Content is protected !!
Scroll to Top