ನೀರೆ : ಮನೆಯಿಂದ ಚಿನ್ನಾಭರಣ ಕಳವು

ಕಾರ್ಕಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ಕಳವುಗೈದ ಘಟನೆ ಮೇ 28ರಂದು ನೀರೆ ಗ್ರಾಮದಲ್ಲಿ ಸಂಭವಿಸಿದೆ. ರಾಧಾಕೃಷ್ಣ ಎಂಬವರ ಮನೆಯಲ್ಲಿ ಬುಧವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.45ರ ಮದ್ಯಾವಧಿಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಯ ಹಿಂದಿನ ಬಾಗಿಲನ್ನು ಯಾವುದೋ ಸಾಧನದಿಂದ ತೆರೆದು ಒಳಪ್ರವೇಶಿಸಿ ಕೋಣೆಯೊಳಗಡೆ ಮೇಕಪ್‌ ಸ್ಟ್ಯಾಂಡ್‌ನ ಡ್ರಾವರ್‌ನಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಕಡಗ, ಕಪಾಟಿನ ಬಾಕ್ಸ್‌ನಲ್ಲಿದ್ದ ಬೆಳ್ಳಿಯ ಸೊಂಟದ ನೂಲು -2, ಬೆಳ್ಳಿಯ ತುಳಸಿ ಮಾಲೆ -1 ಮತ್ತು 1 ಜೊತೆ ಬೆಳ್ಳಿಯ ಕಾಲುಗೆಜ್ಜೆಯನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top