ಹೆಚ್. ಎಸ್. ವಿ. ಹಾಡುಗಳಲ್ಲಿ ಚಿರಂಜೀವಿ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾಗೋ ಮುಗಿಲಿನಂತೆ

ತೂಗುಮಂಚದಲ್ಲಿ ಕೂತು…

ಆ ಬಾನು ಆ ಹಕ್ಕಿ..

ಹುಚ್ಚು ಖೋಡಿ ಮನಸು…

ಇಷ್ಟು ಕಾಲ ಒಟ್ಟಿಗಿದ್ದು…

ಬಯಸಿದೆ ನಿನ್ನನು..

ಐದು ಬೆರಳು ಕೂಡಿ ಒಂದು ಮುಷ್ಟಿಯು..

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ..

ಎಲ್ಲಿರುವಳೋ ನಲ್ಲೆ..

ಲೋಕದ ಕಣ್ಣಿಗೆ ರಾಧೆಯು ಕೂಡ..

ಬಾನಲ್ಲಿ ತೇಲೋ ಮೋಡ ( ಅಮೇರಿಕಾ ಅಮೇರಿಕಾ ಸಿನೆಮಾದಲ್ಲಿ ಅಳವಡಿಕೆ ಆಗಿದೆ)

ರೆಕ್ಕೆ ಇದ್ದರೆ ಸಾಕೇ ( ಚಿನ್ನಾರಿ ಮುತ್ತ ಸಿನೆಮಾ)

ಇರುಳ ವಿರುದ್ದ ಬೆಳಕಿನ ಯುದ್ಧ ( ಜನಪ್ರಿಯ ಮುಕ್ತ ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆ)

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ…

ಇಂತಹ ನೂರಾರು ಹಾಡುಗಳ ಮೂಲಕ ಹೆಚ್. ಎಸ್. ವಿ. ಅವರು ನಮ್ಮ ನಡುವೆ ಚಿರಂಜೀವಿಯೇ ಆಗಿರುತ್ತಾರೆ. ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ, ಬಿ. ಆರ್. ಛಾಯಾ, ಪುತ್ತೂರು ನರಸಿಂಹ ನಾಯಕ್, ಎಂ. ಡಿ. ಪಲ್ಲವಿ, ಶಂಕರ್ ಶಾನುಭೋಗ ಮೊದಲಾದವರ ಸಿರಿಕಂಠಗಳಲ್ಲಿ ಅವರ ಹಾಡುಗಳನ್ನು ಕಣ್ಣು ಮುಚ್ಚಿ ಕೇಳುತ್ತಾ ಕೂತರೆ ಈ ಜಗತ್ತೇ ಮರೆತು ಬಿಡುತ್ತೇವೆ. ಅದರಲ್ಲಿಯೂ ಇರಬೇಕು ಇರುವಂತೆ ಮತ್ತು ತೂಗುಮಂಚದಲ್ಲಿ ಕೂತು (ಕಿರಿಕ್ ಪಾರ್ಟಿ ಕನ್ನಡ ಸಿನೆಮಾದಲ್ಲಿ ಈ ಹಾಡು ಇದೆ)ಜಾಲತಾಣದ ವೇದಿಕೆಗಳಲ್ಲಿ ಅತೀ ಹೆಚ್ಚು ಆಲಿಸಲ್ಪಟ್ಟ ಹಾಡುಗಳು.

ಹೆಚ್. ಎಸ್. ವಿ ಅಂದರೆ ಇಷ್ಟು ಮಾತ್ರ ಅಲ್ಲ!
ವೆಂಕಟೇಶ್ ಮೂರ್ತಿಯವರು ಬರೆದಿರುವ ನೂರಾರು ಜನಪ್ರಿಯ ಪುಸ್ತಕಗಳಲ್ಲಿ ಹೆಚ್ಚಿನವು ಮಕ್ಕಳಿಗಾಗಿ ಬರೆದ ಕೃತಿಗಳು. ಮಕ್ಕಳ ಕಲ್ಪನಾ ಲೋಕವನ್ನು ಅವರಷ್ಟು ಸಲೀಸಾಗಿ ಬೆಳೆಸಿದ ಲೇಖಕರು ಕನ್ನಡದಲ್ಲಿ ಹೆಚ್ಚಿಲ್ಲ. ಅವರು ಬರೆದ ನಾಟಕಗಳು ನೂರಾರು ಪ್ರಯೋಗವನ್ನು ಕಂಡಿವೆ. ವಿದೇಶದ ವೇದಿಕೆಗಳಲ್ಲಿ ಕೂಡ ಪ್ರದರ್ಶನ ಕಂಡಿವೆ. ಹಲವು ಮಹಾ ಕಾವ್ಯಗಳನ್ನು ಕೂಡ ಅವರು ಬರೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ಚಿನ್ನಾರಿ ಮುತ್ತಾ ಮತ್ತು ಕೊಟ್ರೇಶಿ ಕನಸು ಸಿನೆಮಾದ ಎಲ್ಲ ಹಾಡುಗಳನ್ನು, ಸಂಭಾಷಣೆ ಕೂಡ ಅವರು ಬರೆದಿದ್ದಾರೆ. ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರಿಗೆ ದೊರೆತಿದೆ.

ಭಾವಗೀತೆಗಳ ಪ್ರಪಂಚದಲ್ಲಂತೂ ಅವರು ಅನಭಿಷಿಕ್ತ ಸಾಮ್ರಾಟ
ಕನ್ನಡದಲ್ಲಿ ಜಿ. ಎಸ್. ಶಿವರುದ್ರಪ್ಪ ಬಿಟ್ಟರೆ ಇಷ್ಟು ಜನಪ್ರಿಯ ಭಾವಗೀತೆಗಳನ್ನು ಬರೆದವರು ಬೇರೆ ಯಾರೂ ಇಲ್ಲ ಎಂದು ನನ್ನ ಅಭಿಪ್ರಾಯ. ನಾಡು ಮೆಚ್ಚಿದ ನೂರಾರು ಕನ್ನಡದ ಶ್ರೇಷ್ಟ ಭಾವಗೀತೆಗಳನ್ನು ಬರೆದು ಕನ್ನಡವನ್ನು ಶ್ರೀಮಂತ ಮಾಡಿದ ಕನ್ನಡದ ಹಿರಿಯ ಕವಿ ಡಾಕ್ಟರ್ ಹೆಚ್. ಎಸ್. ವೆಂಕಟೇಶ ಮೂರ್ತಿ ಅವರಿಗೆ ನಮ್ಮ ಶ್ರದ್ಧಾಂಜಲಿ.









































































































error: Content is protected !!
Scroll to Top