ಹೆಬ್ರಿ : ಗಾಂಜಾ ಮಾರಾಟ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಪೊಲೀಸರು ದಾಳಿ ನಡೆಸಿರುವ ಘಟನೆ ಮೇ 19ರಂದು ಹೆಬ್ರಿಯಲ್ಲಿ ಸಂಭವಿಸಿದೆ.
ಪೊಲೀಸ್ ಉಪನಿರೀಕ್ಷಕ (ತನಿಖೆ) ಅಶೋಕ ಮಾಳಬಾಗಿ ಅವರಿಗೆ ಬೆಳ್ಳಂಜೆ ಗ್ರಾಮದ ತುಂಬೆಜಡ್ಡುವಿನಲ್ಲಿ ಮೋಹನ್ ದಾಸ್ ಎಂಬವರ ಮನೆಯ ಪಕ್ಕದಲ್ಲಿರುವ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದಾರೆ. ಈ ವೇಳೆ ತೇಜಸ್, ಪ್ರಜ್ವಲ್ ಮತ್ತು ಪ್ರವೀಣ್ ಗಾಂಜಾ ಮಾರಾಟ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವುದು ಖಚಿತವಾಗಿರುತ್ತದೆ. ಆರೋಪಿಗಳೊಂದಿಗೆ ಸ್ಥಳದಲ್ಲಿದ್ದ 89,000 ರೂ. ನಗದು, 8 ಮೊಬೈಲ್ ಪೋನ್, 7 ಎಟಿಎಂ ಕಾರ್ಡ್, 3 ಸಿಮ್ ಕಾರ್ಡ್, 2 ನೋಟ್ ಪುಸ್ತಕ ಮತ್ತು 21 ಗ್ರಾಂ ಗಾಂಜಾ ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಹೆಬ್ರಿ : ಗಾಂಜಾ ಮಾರಾಟ – ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಪೊಲೀಸ್ ದಾಳಿ





















