ಕಾರ್ಕಳ : ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಪರಿಣಾಮವಾಗಿ ವಿವಿಧೆಡೆ ಅಪಾರ ಹಾನಿ, ರಸ್ತೆ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಮಣಿಪಾಲ ರಸ್ತೆ ಪ್ರವಾಹದಂತಾಗಿದ್ದು ಹರಿದು ಬಂದ ನೀರಿಗೆ ರಸ್ತೆಯಲ್ಲೆಲ್ಲಾ ಕಲ್ಲುಗಳ ರಾಶಿ ತುಂಬಿ ವಾಹನ ಸಂಚಾರಕ್ಕೆ ಅಡೆಚಣೆಯಾಗಿದೆ.
ಕಾರ್ಕಳದಲ್ಲಿ ಮಳೆ ಹಾನಿ
ತಾಲೂಕಿನೆಲ್ಲೆಡೆ ನಿನ್ನೆ ಗುಡುಗು ಸಹಿತ ಮಳೆಯಾಗಿದ್ದು ಪರಿಣಾಮವಾಗಿ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ನಿಟ್ಟೆ ಗ್ರಾಮದ ಬೇಬಿ ಪೂಜಾರ್ತಿ ಅವರ ಮನೆಗೆ ಸಿಡಿಲು ಬಡಿದು 20 ಸಾ. ರೂ. ನಷ್ಟ, ಜಯ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ 20 ಸಾ. ರೂ. ನಷ್ಟ, ರತ್ನಾಕರ ಪೂಜಾರಿ ಮನೆ ಹಾನಿಗೊಳಗಾಗಿ 20 ಸಾ. ರೂ. ನಷ್ಟ ಹಾಗೂ ಮಹಾಬಲ ಪೂಜಾರಿಯವರ ಮನೆ ಸಿಡಿಲಿಗೆ ಹಾನಿಗೊಳಗಾಗಿ 20 ಸಾ. ರೂ. ನಷ್ಟ ಉಂಟಾಗಿದೆ. ಯರ್ಲಪಾಡಿ ಗ್ರಾಮದ ವಿನೋದ ಶೆಟ್ಟಿಯವರ ಮನೆಗೆ ಸಿಡಿಲು ಬಡಿದು 20 ಸಾ. ರೂ. ನಷ್ಟ ಹಾಗೂ ಕಾರ್ಕಳದಲ್ಲಿ ಶರ್ಮಿಳಾ ಅವರ ಮನೆಗೆ ಹಾನಿಯಾಗಿ 10 ಸಾ. ರೂ. ನಷ್ಟ ಉಂಟಾಗಿದೆ.
ಇನ್ನು ಕೆಲವೆಡೆ ರಸ್ತೆ ಬದಿಯಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಪರಿಣಾಮವಾಗಿ ರಸ್ತೆ ಮಧ್ಯ ಮಣ್ಣು, ಕೆಸರು ನೀರು ತುಂಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಮಳೆ ಪ್ರಮಾಣ
ಕಾರ್ಕಳ – 72.6, ಕುಂದಾಪುರ – 6.6, ಉಡುಪಿ – 60.5, ಬೈಂದೂರು – 9.7, ಬ್ರಹ್ಮಾವರ – 18.6, ಕಾಪು – 76.3, ಹೆಬ್ರಿ – 21.6 ಮಿ. ಮೀ ಮಳೆಯಾಗಿರುತ್ತದೆ.
























