ಇಂಡಿಯಾಂಟ ಇ ಮೊಬಿಲಿಟಿ ಸಂಸ್ಥೆಗೆ ಲಕ್ಷಾಂತರ ರೂ. ಪಂಗನಾಮ: ಆರೋಪಿಗಳು ಪೊಲೀಸ್ ಬಲೆಗೆ

ಉಡುಪಿ: ಮಣಿಪಾಲದ ಎಂ‌ಐ‌ಟಿ ಕ್ಯಾಂಪಸ್‌ನಲ್ಲಿ ಬ್ಯಾಟರಿ ಚಾಲಿತ ವಾಹನ ಸೇವೆ ಒದಗಿಸುವ ಇಂಡಿಯಾಂಟ ಇ ಮೊಬಿಲಿಟಿ ಸಂಸ್ಥೆಗೆ ಲಕ್ಷಾಂತರ ರೂ. ವಂಚಿಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಮೂರ್ತಿ ಜಿ.(29), ಆತ್ರಾಡಿಯ ಶಿವರಾಜ್ ನಾಯ್ಕ(30), ಚಿತ್ರದುರ್ಗ ಜಿಲ್ಲೆಯ ಸುದೀಪ್(30), ಮಂಜೇಶ್ವರದ ಜಿತೇಶ ಕಾಂಚನ್(29), ಬೆಳಗಾವಿಯ ಮುತ್ತಣ್ಣ ಅದಿನವರ್(32), ಬೆಳ್ತಂಗಡಿ ನಾವೂರಿನ ಎಂ.ಬಿ.ಅವಿನಾಶ್(24) ಎಂದು ಗುರುತಿಸಲಾಗಿದೆ‌.

ಈ ಆರೋಪಿಗಳು ಇಂಡಿಯಾಂಟ ಇ ಮೊಬಿಲಿಟಿ ಸಂಸ್ಥೆಯ ಕೆಲಸಗಾರರಾಗಿದ್ದು ಬ್ಯಾಟರಿ ಚಾಲಿತ ವಾಹನಗಳನ್ನು ಚಲಾಯಿಸುತ್ತಿದ್ದರು. ಆದರೆ ಕಳೆದ ಎ. 1 ರಿಂದ ಸಂಸ್ಥೆಯ ಕ್ಯೂ ಆರ್ ಕೋಡ್ ಬಳಸದೆ ತಮ್ಮದೇ ಕೋಡ್ ಬಳಸಿ ಪ್ರಯಾಣಿಕರು ನೀಡುವ ಶುಲ್ಕ ಸಂಗ್ರಹಿಸಿ ಸಂಸ್ಥೆಗೆ ಲಕ್ಷಾಂತರ ರೂ. ಮೋಸ ಮಾಡಿದ್ದಾರೆ. ಸುಮಾರು ಹನ್ನೆರಡು ಲಕ್ಷ ಹಣವನ್ನು ಲಪಟಾಯಿಸಿದ್ದಾಗಿ ತಿಳಿದು ಬಂದಿದೆ.

















































































error: Content is protected !!
Scroll to Top