ಕಾರ್ಕಳ : ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಮಾರಿಪೂಜೆ ಅತ್ಯಂತ ವೈಭವದಿಂದ ನಡೆಯುತ್ತಿದೆ. ಇಂದು ಬೆಳಿಗ್ಗೆ ಮೂರು ಮಾರ್ಗ ಮಾರಿಯಮ್ಮ ಕಟ್ಟೆಯಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ನಡೆಯಿತು. ಭಕ್ತಾಧಿಗಳು ಸುಡು ಬಿಸಿಲೆನ್ನದೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಮಲ್ಲಿಗೆ ಸಮರ್ಪಣೆ ಮತ್ತು ಹಣ್ಣುಕಾಯಿ ಮಾಡಿಸಿಕೊಳ್ಳುತ್ತಿದ್ದಾರೆ.
ರಾತ್ರಿ ಮೂರು ಮಾರ್ಗದಿಂದ ಮಾರಿಗುಡಿಗೆ ಶೋಭಾಯಾತ್ರೆ ನಡೆಯಲಿದೆ. ನಾಳೆ ಸಂಜೆ ದೇವಿಗೊಂಬೆಯನ್ನು ಮಾರಿಗುಡಿಯಿಂದ ರಾಮಸಮುದ್ರ ಬಳಿಯಿರುವ ಮಾರಿಪಲ್ಕೆಗೆ ಮೆರವಣಿಗೆಯಲ್ಲಿ ತಂದು ವಿಸರ್ಜಿಸಲಾಗುತ್ತದೆ.































































