ಕಾರ್ಕಳ : ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಎ. 16 ರಿಂದ 25 ರವರೆಗೆ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಬಾಲಲೀಲೆ – ಮಕ್ಕಳ ರಂಗಶಿಬಿರ ನಡೆಯಲಿದೆ.
ಪ್ರವೇಶ ಶುಲ್ಕ 1,000 ರೂ. ಯಿದ್ದು, 8 ರಿಂದ 14 ವರ್ಷದ ಮಕ್ಕಳು ಭಾಗಿಯಾಗಹುದು. ಏ.10ರೊಳಗೆ ನೊಂದಾವಣೆ ಮಾಡಿಕೊಳ್ಳಬೇಕು. ಸರಕಾರಿ ಶಾಲಾ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಮೊದಲು ನೊಂದಾಯಿಸಿದ 100 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ನೊಂದಾವಣೆಗೆ ಬರುವಾಗ ಮಕ್ಕಳ ಆಧಾರ್ ಪ್ರತಿ ಹಾಗೂ ಪಾಸ್ ಪೊರ್ಟ್ ಸೈಜ್ ಪೊಟೋ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಯಕ್ಷ ರಂಗಾಯಣ ಕಚೇರಿಗೆ ಭೇಟಿ ನೀಡಬಹುದು ಅಥವಾ 7676507443, 9900987866, 9980358653 ದೂರವಾಣಿ ಸಂಖ್ಯೆಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





































