ಬೆಂಗಳೂರು : ಅಜೆಕಾರು ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಅವರ ಕೊಲೆ ಪ್ರಕರಣ ಸಂಬಂಧ ಎರಡನೇ ಆರೋಪಿ ಹಿರ್ಗಾನದ ದಿಲೀಪ್ ಹೆಗ್ಡೆಗೆ ಎ. 1 ರಂದು ಹೈಕೋರ್ಟ್ ಜಾಮೀನು ಮಂಜೂರುಗೊಳಿಸಿದೆ.
2024 ಅಕ್ಟೋಬರ್ ನಲ್ಲಿ ಬಾಲಕೃಷ್ಣ ಪೂಜಾರಿಯನ್ನು (45), ಆಕೆಯ ಪತ್ನಿ ಪ್ರತಿಮಾಳೊಂದಿಗೆ (36) ಸೇರಿ, ದಿಲೀಪ್ (28) ಉಸಿರುಗಟ್ಟಿಸಿ ಕೊಲೆಗೈದಿದ್ದರು. ಪ್ರಾರಂಭದ ಹಂತದಲ್ಲಿ ಬಾಲಕೃಷ್ಣ ಅವರ ಸಾವು ಸಹಜ ಎಂಬಂತೆ ಬಿಂಬಿಸಲಾಯಿತಾದರೂ ಕುಟುಂಬದವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸ್ ವಿಚಾರಣೆ ಬಳಿಕ ಕೊಲೆ ಆರೋಪದ ಮೇರೆಗೆ ದಿಲೀಪ್ ಹಾಗೂ ಪ್ರತಿಮಾ ಅವರನ್ನು ಬಂಧಿಸಲಾಯಿತು. ಆರೋಪಿಗಳ ಪರ ವಕೀಲರು ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದು, ಸೆಸನ್ಸ್ ನ್ಯಾಯಾಲಯ ಬೇಲ್ ನಿರಾಕರಿಸಿತು. ಹೀಗಾಗಿ ದಿಲೀಪ್ ಪರ ವಕೀಲರು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ಎ. 1 ರಂದು ಜಾಮೀನು ನೀಡಿ ಆದೇಶಿಸಿದೆ. ದಿಲೀಪ್ ಪರ ನಿಶಿತ್ ಕುಮಾರ್ ಶೆಟ್ಟಿ ವಾದ ಮಂಡಿಸಿದರು.










































