ಕಾರ್ಕಳ : ಮಿಯ್ಯಾರು ಗ್ರಾಮದ ಜೋಡುಕಟ್ಟೆ ಚರ್ಚ್ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ ( KA19 : AEW 5777)ಯಾಗಿ ಮಹಿಳೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಾ. 30ರ ಬೆಳಿಗ್ಗೆ ಸಂಭವಿಸಿದೆ. ಕಾರ್ಕಳ ಮಂಗಳಪಾದೆಯ ಮೇರಿ ವಾಝ್ (70) ಎಂಬವರು ಮಿಯ್ಯಾರು ಚರ್ಚ್ ನಿಂದ ವಾಪಸ್ಸಾಗಿ ರಸ್ತೆ ದಾಟುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಪರಿಣಾಮ ಮಹಿಳೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಮೃತದೇಹ ಕಾರ್ಕಳ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿದೆ ಎಂದು ತಿಳಿದುಬಂದಿದೆ.
ಬೈಕ್ ಸವಾರನಿಗೂ ಗಾಯ
ಬೈಕ್ ಸವಾರ ಮಿಯ್ಯಾರು ಗ್ರಾಮದ ಸಂತೋಷ್ ಅವರಿಗೂ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.



















