ದೇಶಾದ್ಯಂತ ರಂಜಾನ್ ಸಂಭ್ರಮ – 30 ದಿನಗಳ ಉಪವಾಸ ಅಂತ್ಯ

ಬೆಂಗಳೂರು : ಇಂದು ದೇಶಾದ್ಯಂತ ರಂಜಾನ್ ಹಬ್ಬದ ಸಂಭ್ರಮಾಚರಣೆ ನಡೆಯುತ್ತಿದ್ದು, 30 ದಿನಗಳ ಉಪವಾಸ ಅಂತ್ಯವಾಗಿದೆ.
ಮುಸ್ಲಿಂ ಬಾಂಧವರು ಬೆಳಗ್ಗೆಯೇ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ನಿನ್ನೆ ದೇಶದ ಪ್ರಮುಖ ನಗರಗಳಲ್ಲಿ ಈದ್-ಉಲ್-ಫಿತರ್ ಚಂದ್ರನನ್ನು ನೋಡಿದ ನಂತರ ಇಂದು ಹಬ್ಬ ಆಚರಿಸಲಾಗುತ್ತಿದೆ.

ರಂಜಾನ್ ತಿಂಗಳ ಉಪವಾಸ ಚಂದ್ರನ ದರ್ಶನದೊಂದಿಗೆ ಪ್ರಾರಂಭವಾಗಿದೆ. 30 ದಿನಗಳ ಉಪವಾಸದ ನಂತರ, ಶವ್ವಾಲ್ ಪ್ರಾರಂಭವಾಗಿದೆ. ಇದು ರಂಜಾನ್ ಅಂತ್ಯದ ನಂತರ ಬರುವ ಇಸ್ಲಾಮಿಕ್ ಕ್ಯಾಲೆಂಡರ್‌ನ 10ನೇ ತಿಂಗಳು.

ಮುಸ್ಲಿಂ ಸಮುದಾಯಕ್ಕೆ ಈದ್ ಒಂದು ಪ್ರಮುಖ ಹಬ್ಬ. ಈದ್-ಉಲ್-ಫಿತರ್ ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಮುಸ್ಲಿಂ ಸಮುದಾಯದ ಜನರು ರಂಜಾನ್ ತಿಂಗಳು ಪೂರ್ತಿ ಉಪವಾಸ ವ್ರತ ಆಚರಿಸುತ್ತಾರೆ. ನಂತರ ಈದ್ ಹಬ್ಬ ಬರುತ್ತದೆ. ಉಪವಾಸ ಮತ್ತು ಪ್ರಾರ್ಥನೆಯ ಪವಿತ್ರ ತಿಂಗಳು ಈದ್ ಉಲ್ ಫಿತರ್ ನೊಂದಿಗೆ ಕೊನೆಗೊಳ್ಳುತ್ತದೆ. ಈ ವಿಶೇಷ ದಿನದಂದು ಜನರು ಪರಸ್ಪರ ಹಾರೈಸುತ್ತಾರೆ ಮತ್ತು ಸಹೋದರತ್ವದ ಸಂದೇಶವನ್ನು ಹರಡುತ್ತಾರೆ. ಪ್ರೀತಿ, ಶಾಂತಿ ಮತ್ತು ಸಮೃದ್ಧಿಯ ಆಶಯದೊಂದಿಗೆ ಈ ಹಬ್ಬವನ್ನು ಪ್ರಪಂಚದಾದ್ಯಂತ ಸಂತೋಷದಿಂದ ಆಚರಿಸಲಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಈದ್‌ಗಾಗಿ ಕಾಯುತ್ತಾರೆ.







































error: Content is protected !!
Scroll to Top