ಕಾರ್ಕಳ : ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಮಾ. 23ರಂದು ಸಿಬ್ಬಂದಿಯೊಂದಿಗೆ ಕಸಬಾ ಗ್ರಾಮದ ಟಿ.ಎಮ್.ಎ.ಪೈ ಆಸ್ಪತ್ರೆ ಸಮೀಪ ದಾನವಿ ಎಸಿಸಿ ಸಿಮೆಂಟ್ ಗೋಡೌನ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಸರಕಾರಿ ಸ್ಥಳದಿಂದ ಕಳವು ಮಾಡಿದ 2 ಯುನಿಟ್ ಮರಳನ್ನು ಪುಲ್ಕೆರಿ ಕಡೆಯಿಂದ ಜೋಡುರಸ್ತೆಯ ಕಡೆಗೆ ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ KA-19-D-5585ನೇ ನಂಬ್ರದ ಟಿಪ್ಪರ್ ಲಾರಿಯನ್ನು ತಡೆದು ತಪಾಸಣೆ ನಡೆಸಿ ಟಪ್ಪರ್ ಲಾರಿ ಸಹಿತ ಮರಳನ್ನು ಸ್ವಾದೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ಅಕ್ರಮ ಸಾಗಾಟ – ದೂರು ದಾಖಲು






























































