ಸದನದಲ್ಲಿ ಆದಿ ದ್ರಾವಿಡ ಸಮುದಾಯದ ಬಗ್ಗೆ ಸುನಿಲ್‌ ಕುಮಾರ್ ಧ್ವನಿ‌ ಎತ್ತಿರುವುದು ಸಂತಸದಾಯಕ – ಶ್ರೀನಿವಾಸ ಕಾರ್ಲ

ಕಾರ್ಕಳ : ವಿಧಾನಸಭಾ ಅಧಿವೇಶನದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಕರಾವಳಿಯ ಸಮಸ್ಯೆಗಳ ಕುರಿತು ಮಾತನಾಡಿದ ವೇಳೆ ಆದಿದ್ರಾವಿಡ ಸಮಾಜದ ಸತ್ಯಸಾರಮಣಿ ದೈವಸ್ಥಾನಗಳ ಭೂ ದಾಖಲೆಗೆ ಸಂಬಂಧಪಟ್ಟಂತೆ ವಿಷಯ ಪ್ರಸ್ತಾವಿಸಿರುವುದು ಆದಿ ದ್ರಾವಿಡ ಸಮಾಜಕ್ಕೆ ಅತ್ಯಂತ ಸಂತೋಷವಾಗಿದೆ ಎಂದು ಶ್ರೀನಿವಾಸ್‌ ಕಾರ್ಲ ಹೇಳಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಪರಿಶಿಷ್ಟ ಜಾತಿಗೆ ಸೇರಿದಂತೆ ಆದಿ ದ್ರಾವಿಡ ಸಮುದಾಯದ ಜನರಿದ್ದಾರೆ. ಈ ನಮ್ಮ ಸಮುದಾಯದ ಕುಲದೇವರುಗಳಾದ ಸತ್ಯಸಾರಮಣಿ ದೈವಸ್ಥಾನಗಳು ಪ್ರತಿ ಗ್ರಾಮಗಳಲ್ಲಿದೆ. ಆದರೆ ಹೆಚ್ಚಿನ ದೈವಸ್ಥಾನಗಳು ಅದಕ್ಕೆ ಸಂಬಂಧಿಸಿದ ಭೂಮಿಗೆ ಯಾವುದೇ ಪಹಣಿಯನ್ನು ಹೊಂದಿರುವುದಿಲ್ಲ. ದಶಕಗಳಿಂದ ಈ ಸಮುದಾಯದ ಜನ ತಮ್ಮ ದೈವಸ್ಥಾನದ ಜಾಗದ ದಾಖಲೆಗಳನ್ನು ಮಾಡಲು ಅಲೆದಾಡುತ್ತಿದ್ದಾರೆ. ಈ ಕಾರಣದಿಂದಾಗಿ ಸರಕಾರದ ಯಾವುದೇ ಅನುದಾನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದವರು ತಿಳಿಸಿದರು.

ಕಾರ್ಕಳ ಶಾಸಕರು ದೈವಸ್ಥಾನಗಳ ಭೂ ದಾಖಲೆಗಳನ್ನು ಸರಿಪಡಿಸುವುದಕ್ಕೆ ನಿರಂತರ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ವಿಧಾನ ಸಭಾ ಅಧಿವೇಶನದಲ್ಲಿ ಈ ದೈವಸ್ಥಾನಗಳ ದಾಖಲೆಗಳನ್ನು ಸರಿ ಪಡಿಸಲು ಸರಕಾರ ವಿಶೇಷ ಶ್ರಮ ವಹಿಸಬೇಕೆಂದು ಆಗ್ರಹಿಸಿರುವುದು ಮತ್ತು ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ವಿಶೇಷ ಅದಾಲತ್ ನಡೆಸಿ ಪಹಣಿ ನೀಡಬೇಕೆಂದು ಆಗ್ರಹಿಸಿರುವುದು ಶ್ಲಾಘನೀಯವೆಂದರು.

ಸ್ವರ್ಣ ಕಾರ್ಕಳದ ಕನಸು ಕಟ್ಟಿಕೊಂಡು ಅನೇಕ ಒಳ್ಳೆಯ ಯೋಚನೆ ಮತ್ತು ಯೋಜನೆಗಳನ್ನು ರೂಪಿಸಿಕೊಂಡಿರುವ ಸುನಿಲ್‌ ಕುಮಾರ್‌ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿಯೂ ‍ಶ್ರಮವಹಿಸಿದ್ದಾರೆ. ಕಾರ್ಕಳ ನಗರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿದೆ. ಇದು ಕೂಡ ನಮ್ಮ ಸಮುದಾಯದವರಿಗೆ ಅನುಕೂಲಕರ





























































































































error: Content is protected !!
Scroll to Top