ಕಾರ್ಕಳ : ಕಾರ್ಕಳ ತಾಲೂಕು ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾ. 18ರಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಭೇಟಿ ನೀಡಿದರು. ಈ ವೇಳೆ ವಿಷ್ಟುಮೂರ್ತಿ ದೇವರಿಗೆ ಹೂವಿನ ಪೂಜೆ ಸಲ್ಲಿಸಿ, ನಾಗಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಮಾಡಿದರು. ಬಳಿಕ ಮಾತನಾಡಿದ ಅವರು ಕಳೆದ 13 ವರ್ಷಗಳಿಂದ ಪ್ರತಿವರ್ಷ ಕರ್ವಾಲು ಕ್ಷೇತ್ರಕ್ಕೆ ಬರುತ್ತಿದ್ದೇನೆ. ಇಲ್ಲಿಗಾಗಮಿಸಿದಾಗ ನನ್ನ ಮನಸ್ಸಿಗೆ ನೆಮ್ಮದಿ ದೊರೆಯುವುದು. ದೇವರ ಅನುಗ್ರಹ ಲಭಿಸುವುದು ಎಂದರು.
ದೇವಸ್ಥಾನದ ವತಿಯಿಂದ ರವಿಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಅನಂತಪಟ್ಟಾಭಿ ರಾವ್, ಆಡಳಿತ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ವರದರಾಜ ತಂತ್ರಿ ಬೈಲೂರು, ಪ್ರಮುಖರಾದ ಹರಿಶ್ವಂದ್ರ ರಾವ್, ಪ್ರಶಾಂತ್ ಕುಮಾರ್ ಗುತ್ತುಮನೆ ಬೈಲೂರು, ದಿಲೀಪ್ ಶೆಟ್ಟಿ ನೀರೆ ಮೊದಲಾದವರು ಈ ಸಂದರ್ಭದಲ್ಲಿದ್ದರು.
ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ರವಿಶಾಸ್ತ್ರಿ ಭೇಟಿ






























































