ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದಿಂದ ದಿ. ಮಹಾವೀರ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡ ಮಾ. 2ರಂದು ಶ್ರಮದಾನದ ಮುಖಾಂತರ ತಮ್ಮ ತಂಡದ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿದ್ದ ಫೆ. 16ರಂದು ನಿಧನರಾದ ದಾನಶಾಲೆ ನಿವಾಸಿ ಮಹಾವೀರ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮಹಾವೀರ್ ಪ್ರಸಾದ್ ನೆನಪಿನಲ್ಲಿ ತಂಡವು ಭಾನುವಾರ ಸ್ವಚ್ಛ ಮಾರ್ಗಂ ಅಭಿಯಾನದಡಿಯಲ್ಲಿ ದಾನಶಾಲೆ ಮುಖ್ಯ ರಸ್ತೆ, ಗೋಮ್ಮಟ ಬೆಟ್ಟ ಪರಿಸರದಲ್ಲಿ ದಾನಶಾಲೆ ನಿವಾಸಿಗಳೊಂದಿಗೆ ಬೃಹತ್ ಸ್ವಚ್ಛತಾ ಕಾರ್ಯ ಮತ್ತು ಪೈಪ್-ಲೈನ್ ಅಳವಡಿಕೆ ಕಾಮಗಾರಿಯಿಂದಾದ ಹೊಂಡಗಳನ್ನು ಮಣ್ಣು ಜಲ್ಲಿ ತುಂಬಿ ಮುಚ್ಚು ಕಾರ್ಯ ಮಾಡಿದರು. ಸ್ಥಳೀಯರಾದ ನೇಮಿರಾಜ್ ಅರಿಗ, ಮೃತ ಮಹಾವೀರ್ ಪ್ರಸಾದ ಅವರ ಸಹೋದರ ಶ್ರೀಕಾಂತ್ ಜೈನ್, ಸಹೋದರಿ ಅರುಣಾ ಜೈನ್ ಮತ್ತು ಸ್ವಚ್ಛ ಬ್ರಿಗೇಡ್ ತಂಡ ಹಾಗು ಸ್ಥಳೀಯರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.





























































































































error: Content is protected !!
Scroll to Top