ನಿಷ್ಠೆ – ಪ್ರಾಮಾಣಿಕತೆಯಿಂದ ಉದ್ಯಮದಲ್ಲಿ ಪ್ರಗತಿ – ಫಾ. ಲೋರಿ ಪಿಂಟೋ
ಕಾರ್ಕಳ : ನಿಷ್ಠೆ, ಪ್ರಾಮಾಣಿಕತೆ ಮತ್ತು ಕೆಲಸದಲ್ಲಿ ಅಚ್ಚುಕಟ್ಟುತನ ಇದ್ದಾಗ ಮಾತ್ರ ಉದ್ಯಮದಲ್ಲಿ ಪ್ರಗತಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ರಾಜೇಶ್ ಲೋಬೋ ಅವರ ಕಾರ್ಯವೈಖರಿ ಮಾದರಿ ಎಂದು ಸಂತ ಲಾರೆನ್ಸ್ ಬಸಿಲಿಕಾದ ಸಹಾಯಕ ಧರ್ಮಗುರು ಫಾ. ಲ್ಯಾರಿ ಪಿಂಟೋ ಅಭಿಪ್ರಾಯಪಟ್ಟರು.
ಅವರು ಮಾ. 1ರಂದು ಕಾರ್ಕಳ ಜೋಗಲ್‌ಬೆಟ್ಟು ಇಂಡಸ್ಟ್ರೀಯಲ್ ಏರಿಯಾದಲ್ಲಿ ಶುಭಾರಂಭಗೊಂಡ ರಾಜೇಶ್ ಲೋಬೋ ಮಾಲಕತ್ವದ ಮೆ| ಸಿನೇಟ್ ಮೆಟಲ್ಸ್ ಸಂಸ್ಥೆ ಉದ್ಘಾಟಿಸಿ ಮಾತನಾಡಿದರು.
ರಾಜೇಶ್ ಲೋಬೋ ಜೀರೋದಿಂದ ಸ್ಟೀಲ್ ಇಂಡಸ್ಟ್ರೀಸ್ ಉದ್ಯಮ ಪ್ರಾರಂಭಿಸಿ ಇಂದು ಓರ್ವ ಯಶ್ವಸಿ ಉದ್ಯಮಿಯಾಗಿ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎನ್‌ಸಿಎಸ್ & ಕೋ. ಸಂಸ್ಥಾಪಕ ನಿತೀಶ್ ಶೆಟ್ಟಿ ಮಾತನಾಡಿ, ಒಂದು ಉದ್ದಿಮೆ ಸ್ಥಾಪನೆಯಿಂದ ಒಂದಷ್ಟು ಕಾರ್ಮಿಕರಿಗೆ ಉದ್ಯೋಗ, ಸ್ಥಳೀಯ ಆಡಳಿತ ಮತ್ತು ಸರಕಾರಕ್ಕೂ ಆದಾಯ ದೊರೆಯುವುದು. ಉದ್ಯಮ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ರಾಜೇಶ್ ಲೋಬೋ ಅವರು ಯುವ ಉದ್ಯಮಿಗಳಿಗೆ ಮಾರ್ಗದರ್ಶಕರೂ ಹೌದು ಎಂದರು.
ಸಂತ ಲಾರೆನ್ಸ್ ಬಸಿಲಿಕಾದ ಪಾಲನ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ ಮಾತನಾಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಉದ್ಯಮಿಗಳ ಕೊಡುಗೆ ಮಹತ್ತರ. ವ್ಯಾಪಾರಕ್ಕೆ ಯಾವುದೇ ಧರ್ಮದ ಅಡಚಣೆಯಿಲ್ಲ. ನಿಯತ್ತು ಮತ್ತು ನಿಷ್ಠೆಯಿದ್ದಾಗ ಯಶಸ್ಸು ಖಚಿತ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಮಾಲಕ ರಾಜೇಶ್ ಲೋಬೋ, ದೇವರ ಅನುಗ್ರಹ, ಗ್ರಾಹಕರ ಪ್ರೋತ್ಸಾಹದಿಂದ ನಮ್ಮ ಸಂಸ್ಥೆ ಅಭಿವೃದ್ಧಿಗೊಂಡಿದೆ. ಸಂಸ್ಥೆ ಬೆಳವಣಿಗೆಯಲ್ಲಿ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ ಎಂದರು.
ಸಂತ ಲಾರೆನ್ಸ್ ಬಸಿಲಿಕಾದ ಆಧ್ಯಾತ್ಮಿಕ ನಿರ್ದೇಶಕ ಫಾ. ರೋಮನ್ ಮಸ್ಕರೇನಸ್, ಪುರಸಭೆಯ ಅಧ್ಯಕ್ಷ ಯೋಗೀಶ್ ದೇವಾಡಿಗ, ಸದಸ್ಯ ವಿನ್ನಿಬೊಲ್ಡ್ ಮೆಂಡೊನ್ಸ, ಬಸಿಲಿಕದ ಧರ್ಮ ಭಗಿನಿ ಶಾಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಾರ ಲೋಬೋ ಸ್ವಾಗತಿಸಿ, ರಿಯಾ ಕಾರ್ಯಕ್ರಮ ನಿರೂಪಿಸಿದರು.






























































