ಒಂದನೇ ತರಗತಿಗೆ ಸೇರ್ಪಡೆಯಾಗಲು ಜೂ. 1ಕ್ಕೆ ಆರು ವರ್ಷ ಭರ್ತಿ ಕಡ್ಡಾಯ

ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ಸೇರ್ಪಡೆಯಾಗಲು ಜೂನ್‌ 1 ಕ್ಕೆ ಆರು ವರ್ಷ ಭರ್ತಿ ಆಗಿರಬೇಕೆಂಬ ನಿಯಮವನ್ನು ಯಾವ ಕಾರಣಕ್ಕೂ ಸಡಿಲಿಸಬಾರದು ಎಂದು ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್‌) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದೆ.

ಕಳೆದೆರಡು ಶೈಕ್ಷಣಿಕ ವರ್ಷದಲ್ಲಿ ಆರು ವರ್ಷ ಭರ್ತಿಯಾಗದ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ ನೀಡಿ ರಿಯಾಯಿತಿ ನೀಡಲಾಗಿತ್ತು. ಹಾಗೆಯೇ ಈ ಮೊದಲೇ 2025-26ರ ಸಾಲಿನಿಂದ ಆರು ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೂ ಪ್ರತಿ ವರ್ಷ ದಾಖಲಾತಿ ಸಂದರ್ಭದಲ್ಲಿ ಕಡಿಮೆ ಇದ್ದವರು, ನಿಯಮ ತಿಳಿದಿದ್ದರೂ ಹೆಚ್ಚುವರಿಯಾಗಿ ತರಗತಿಗೆ ದಾಖಲು ಮಾಡಲು ಸರಕಾರದ ಮೇಲೆ ಒತ್ತಡ ಹೂಡುವ ತಂತ್ರ ಮಾಡುತ್ತಿದ್ದಾರೆ ಎಂದು ಕ್ಯಾಮ್ಸ್‌ ಆರೋಪಿಸಿದೆ.

ಮತ್ತೊಂದು ಕಡೆ ನಿಯಮ ಸಡಿಲಿಕೆ ಮಾಡಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕೆಂದು ಪೋಷಕರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಅಲ್ಲದೆ, ಪೋಷಕರೆಲ್ಲರೂ ಸೇರಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಸರಕಾರವನ್ನು ಆಗ್ರಹಿಸಲು ಆಲೋಚಿಸಿದ್ದಾರೆ. ಈ ಕಡೆ ಖಾಸಗಿ ಶಾಲೆಗಳು ಹಾಲಿ ಇರುವ ನಿಯಮವನ್ನೇ ಪಾಲಿಸುವಂತೆ ಒತ್ತಾಯಿಸುತ್ತಿವೆ.

ವಿರೋಧದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌, ಶಿಕ್ಷಣ ಇಲಾಖೆಯ ನೋಂದಣಿ ಪಡೆಯದೆ ನಿಯಮಬಾಹಿರವಾಗಿ ಅನಧಿಕೃತ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ನಿಯಮ ಗೊತ್ತಿದ್ದರೂ, ಬೇಜವಾಬ್ದಾರಿ ವರ್ತನೆ ತೋರಿ, ಪೋಷಕರ ದಾರಿ ತಪ್ಪಿಸಲಾಗಿದೆ. ಇದೀಗ ಅಂತಹ ಸಂಸ್ಥೆಗಳು ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ನಕಲು ಪ್ರಮಾಣ ಪತ್ರ ಮಾಡಿಸಲು ಪ್ರೋತ್ಸಾಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.





























































































































error: Content is protected !!
Scroll to Top