ನಿಟ್ಟೆ : ಕಾರಿನಲ್ಲಿ ಬಂದ ತಂಡದಿಂದ ಯುವಕ ಮೇಲೆ ಹಲ್ಲೆ

ಕಾರ್ಕಳ : ಯುವಕನ ಮೇಲೆ ಕಾರಿನಲ್ಲಿ ಬಂದ ತಂಡ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿ, ಚೂರಿ ತೋರಿಸಿ ಪ್ರಾಣ ಬೆದರಿಕೆಯೊಡ್ಡಿದ ಘಟನೆ ಫೆ.18ರಂದು ನಿಟ್ಟೆಯಲ್ಲಿ ಸಂಭವಿಸಿದೆ. ಉಡುಪಿ ಬೊಮ್ಮರಬೆಟ್ಟು ಗ್ರಾಮದ ಸಾತ್ವಿಕ್‌ (20) ಎಂಬವರು ಮಧ್ಯಾಹ್ನ 1.30ಕ್ಕೆ ನಿಟ್ಟೆ ಕಾಲೇಜು ಹಿಂಭಾಗದಲ್ಲಿರುವ ವಿಜಯಂತ್ ಎಂಬುವವರ ಅಂಗಡಿಯ ಸಮೀಪ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳಾದ ಯತೀಶ್‌, ಹರ್ಷ, ವಿನೋದ್‌ ಹಾಗೂ ಇನ್ನಿಬ್ಬರು KA-20-ME-9505 ನೋಂದಣಿಯ ಕಾರಿನಲ್ಲಿ ಬಂದು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ್ದು, ವಿನೋದ್‌ ಕೈಯಲ್ಲಿದ್ದ ಚೂರಿ ತೋರಿಸಿ ಕೊಲ್ಲುವುದಾಗಿ ಬೆದರಿಸಿದ್ದಾನೆ. ಸಾತ್ವಿಕ್‌ ನೀಡಿದ ದೂರಿನ ಪ್ರಕಾರ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































error: Content is protected !!
Scroll to Top