ನೂತನ ಅಧ್ಯಕ್ಷರಾಗಿ ವಿಲ್ಸನ್ ಮಸ್ಕರೇನ್ಹಾಸ್ – ಕಾರ್ಯದರ್ಶಿಯಾಗಿ ಆಂಟನಿ ಮಿರಾಂಡಾ
ಕಾರ್ಕಳ : ಕಥೊಲಿಕ್ ಸಭಾ ಕಾರ್ಕಳ ವಲಯದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಲ್ಸನ್ ಮಸ್ಕರೇನ್ಹಾಸ್ ಕೇರಾ ಹಾಗೂ ಕಾರ್ಯದರ್ಶಿಯಾಗಿ ಆಂಟನಿ ಮಿರಾಂಡಾ ಕಣಂಜಾರು ಆಯ್ಕೆಯಾಗಿದ್ದಾರೆ. ಫೆ. 16ರಂದು ಕ್ರಿಸ್ತ ರಾಯ ಚರ್ಚ್ ಸಭಾ ಮಂದಿರದಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಚುನಾವಣಾಧಿಕಾರಿಯಾಗಿ ಕೇಂದ್ರೀಯ ನಿಕಟ ಪೂರ್ವ ಅಧ್ಯಕ್ಷೆ ಮೇರಿ ಡಿ’ಸೋಜ ಹಾಗೂ ವೀಕ್ಷಕರಾಗಿ ಕೇಂದ್ರೀಯ ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಕಾರ್ಯನಿರ್ವಹಿಸಿದರು.
ನಿಕಟ್ ಪೂರ್ವ ಅಧ್ಯಕ್ಷರಾಗಿ ಜೋನ್ ಟೆಲ್ಲಿಸ್ ಅಜೆಕಾರು, ನಿಯೋಜಿತ ಅಧ್ಯಕ್ಷರಾಗಿ ಒಲಿವಿಯಾ ಡಿ’ಮೆಲ್ಲೊ, ಉಪಾಧ್ಯಕ್ಷೆಯಾಗಿ ಒಫಿಲೀಯ ಡಿ’ಸೋಜ ಪರಪ್ಪಾಡಿ, ಸಹ ಕಾರ್ಯದರ್ಶಿಯಾಗಿ ಲವೀನಾ ಡಿ’ಸೋಜ ನಕ್ರೆ, ಕೋಶಾಧಿಕಾರಿಯಾಗಿ ಪ್ರತೀಮಾ ಡಿ’ಸೋಜ ಹಿರ್ಗಾನ, ಸಹ ಕೋಶಾಧಿಕಾರಿಯಾಗಿ ಪ್ರೀಯಾ ಕ್ವಾಡ್ರಸ್ ಕಣಂಜಾರು, ಆಮ್ಚೊ ಸಂದೇಶ್ ಪತ್ರಿಕೆ ಪ್ರತಿನಿಧಿಯಾಗಿ ಸೋನು ಸಿಕ್ವೇರಾ ಮಿಯ್ಯಾರು, ರಾಜಕೀಯ ಸಂಚಾಲಕರಾಗಿ ಸೊಲೊಮನ್ ಆಲ್ವಾರಿಸ್ ಕಾರ್ಕಳ ನಗರ, ಸರಕಾರಿ ಸವಲತ್ತು ಸಂಚಾಲಕರಾಗಿ ಡೇನಿಸ್ ವಾಜ್ ಅತ್ತೂರು, ಸ್ರೀ ಸಶಕ್ತಿಕರಣ ಸಂಚಾಲಕರಾಗಿ ಗ್ರೇಸಿ ಕೊಯೆಲ್ಲೊ ಅತ್ತೂರು, ಅಂತರಿಕ ತಪಾಸಣೆ ಸಂಚಾಲಕರಾಗಿ ಆಂಟೊನಿ ಲೋಬೊ ಅಜೆಕಾರು ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ 9 ಘಟಕದ 76 ಸದಸ್ಯರು ಪಾಲ್ಗೊಂಡಿದ್ದರು.































































