ಅಧ್ಯಕ್ಷರಾಗಿ ರಾಘವ ಶೆಟ್ಟಿ – ಉಪಾಧ್ಯಕ್ಷರಾಗಿ ಸತ್ಯನಾರಾಯಣ ಪಡ್ರೆ
ಕಾರ್ಕಳ : ತೆಳ್ಳಾರು ಜಲದುರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಟಿ. ರಾಘವ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಸತ್ಯನಾರಾಯಣ ಪಡ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರೊಂದಿಗೆ ನಿರ್ದೇಶಕರಾಗಿ ಶಂಕರ ನಾಯ್ಕ್, ಅಬ್ದುಲ್ ಮಜೀದ್, ದಿನೇಶ್ ನಾಯಕ್, ಮನೋಜ್ ಶೆಟ್ಟಿ, ದೀಕ್ಷಿತ್ ಜೈನ್, ಕೆ. ಕೃಷ್ಣ, ಸೈಯದ್ ತನ್ವೀರ್, ಡಿ. ಕೆ. ರಾಮ, ಸುಲೋಚನ, ಸುಮತಿ ಪಾಠಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆ. ಆರ್. ರೋಹಿತ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.






























































