ಕಾರ್ಕಳಕ್ಕೆ ಎಎಸ್‌ಪಿಯಾಗಿ ಡಾ. ಹರ್ಷ ಪ್ರಿಯಂವದ
ಕಾರ್ಕಳ : ಕಾರ್ಕಳ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಅವರು ವರ್ಗಾವಣೆಯಾಗಿದ್ದು, ಕಾರ್ಕಳದಲ್ಲಿ ಎಎಸ್‌ಪಿಯಾಗಿ ಡಾ. ಹರ್ಷ ಪ್ರಿಯಂವದ ಅಧಿಕಾರ ಸ್ವೀಕರಿಸಲಿದ್ದಾರೆ. ಕಾರವಾರದಲ್ಲಿ ಡಿವೈಎಸ್‌ಪಿಯಾಗಿ ಕರ್ತ್ಯವ್ಯ ನಿರ್ವಹಿಸುತ್ತಿದ್ದ ಅರವಿಂದ್ ಎನ್. ಕಲಗುಜ್ಜಿ 2023ರ ಫೆ. 1ರಂದು ಕಾರ್ಕಳದ ಡಿವೈಎಸ್‌ಪಿಯಾಗಿ ಅಧಿಕಾರ ವಹಿಸಿದ್ದರು.
ಮೂಲತ: ಜಾರ್ಖಂಡ್‌ನ ಧನ್ಭಾದ್ ಜಿಲ್ಲೆಯ ಡಾ. ಹರ್ಷ ಪ್ರಿಯಂವದ 2018ರಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಶಿಕ್ಷಣ ಪೂರೈಸಿದ್ದು, ಆ ಬಳಿಕ 2020ರಲ್ಲಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 165ನೇ ರ್‍ಯಾಂಕ್ ಪಡೆದಿದ್ದು, ಇದೀಗ ಕಾರ್ಕಳ ನೂತನ ಎಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.






























































