ಹಿರಿಯಡ್ಕ ಪಂಚನಬೆಟ್ಟುವಿನಲ್ಲಿ ಅತ್ಯಪೂರ್ವ ಆರ್ಯಾರ್ಚನಂ ಸಂಪನ್ನ

ಕಾರ್ಕಳ : ಹಿರಿಯಡ್ಕ ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆಯಲ್ಲಿ ಫೆ.11ರಂದು ಆರ್ಯಾರ್ಚನಂ ಎಂಬ ಅತ್ಯಪೂರ್ವವಾದ ಧಾರ್ಮಿಕ ವಿಧಿಯೊಂದನ್ನು ನೆರವೇರಿಸಲಾಯಿತು. ಶ್ರೀ ಕ್ಷೇತ್ರ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ ಅವರ ಮಗ ಗಿರಿಜಾಶಂಕರ ಜೋಷಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಬೆಂಗಳೂರಿನ ಆಶೀರ್ವಾದ್‌ ತೈರಣಿ, ಮೈಸೂರು ರಾಜಪರಂಪರೆಯ ವಿದ್ವಾಂಸ ಧರ್ಮ ವಿದ್ವಾನ್‌ ಲಲಿತಾನಂದನಾಥ ಮಾತನಾಡಿ, ಆರ್ಯಾರ್ಚನಂ ಎನ್ನುವ ಶಬ್ದ ಕೇಳಿಯೆ ಇಲ್ಲಿಗೆ ಬರಲು ನಾನು ಸಮ್ಮತಿಸಿದೆ. ಯಾಕೆಂದರೆ ಭಾರತದಲ್ಲಿ ಎಲ್ಲಿಯೂ ಈ ರೀತಿಯ ಪೂಜಾ ಕೈಕಂರ್ಯ ನಡೆದಿಲ್ಲ. ಭಾರತಾದ್ಯಂತ ಪ್ರವಾಸ ಮಾಡುವ ನಾನು ಇಂತಹ ಪೂಜೆಯನ್ನು ನೋಡಿಲ್ಲ. ಈ ಪೂಜೆಯನ್ನು ನೆರವೇರಿಸಿರುವವರು ಸುಹಾಸಿನಿಯರು, ಅಮ್ಮನವರಿಗೆ ಸುಹಾಸಿನಿಯರೆಂದರೆ ಬಹಳ ಪ್ರೀತಿ ಎನ್ನುವ ಶ್ಲೋಕ ಲಲಿತಾ ಸಹಸ್ರನಾಮದಲ್ಲಿ ಕೇಳುತ್ತೇವೆ ಎಂದರು.
ಗಿರಿಜಾಶಂಕರ ಜೋಷಿಯವರು ಮಾತನಾಡಿ, ಭಗವತಿ ತಾನು ಯಾವ ರೂಪದಲ್ಲಿ ಎಲ್ಲಿರಬೇಕೆಂದು ನೆಲೆಸಲು ಇಚ್ಛೆಯಾಗುತ್ತೊ ಅಲ್ಲಿಯೇ ಇರುವ ಜನರನ್ನು ಹುಡುಕಿ ಅವರಿಗೆ ಆಶೀರ್ವಾದ ಮಾಡುತ್ತಾಳೆ. ಆ ಅನುಗ್ರಹವನ್ನು ಅಜಿತ್‌ ಆಚಾರ್ಯರಿಗೆ ದೇವಿ ಮಾಡಿದ್ದಾಳೆ ಹಾಗಾಗಿ ಇಷ್ಟು ಚೆನ್ನಾಗಿ ಭಗವತಿಯ ಅನುಗ್ರಹದಿಂದ ಈ ಕ್ಷೇತ್ರ ಬೆಳೆಯಲಿಕ್ಕೆ ಸಾಧ್ಯವಾಯಿತು ಎಂದು ಶುಭಾಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜೋತಿರ್ವಿದ್ವಾನ್‌ ಅಜಿತ್‌ ಆಚಾರ್ಯ ಪ್ರಸ್ತಾವನೆಗೈದು, ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆಯಲ್ಲಿ ಆರ್ಯಾರ್ಚನಂ ಮಾಡಲು ಮುಖ್ಯ ಕಾರಣ ನನ್ನ ತಾಯಿ. ಏಳು ವರುಷದ ಹಿಂದೆ ಸ್ಥಾಪನೆಗೊಂಡ ಯಜ್ಞಶಾಲೆಯಲ್ಲಿ ಇಂಥದೊಂದು ಪುಣ್ಯಕಾರ್ಯ ನೆರವೇರಿದೆ ಎನ್ನಲು ಮಾತೆ ದುರ್ಗಾಪರಮೇಶ್ವರಿಯ ಅನುಗ್ರಹದಿಂದ ಎಲ್ಲರ ಜೊತೆಗೂಡಿ ನೆರವೇರಿಸಲು ಸಾಧ್ಯವಾಯಿತು. ವೈದಿಕ ಪರಂಪರೆಯನ್ನು ಮುನ್ನೆಡಿಸಿಕೊಂಡು ಯಾವುದೇ ಚ್ಯುತಿ ಬಾರದಂತೆ ಪಂಚಶಕ್ತಿಗಳ ಆರಾಧನೆಯ ಮೂಲಕ ಯಜ್ಞಶಾಲೆಯಲ್ಲಿ ಆರ್ಯಾರ್ಚನಮ್‌ ಯಶಸ್ವಿಯಾಗಿ ಮೂಡಿಬಂದಿದೆ ಎಂದರು.

ಯರ್ಲಪಾಡಿ ರಾಮಕೃಷ್ಣ ಆಶ್ರಮದ ಶ್ರೀ ಪ್ರಮೋದಾನಂದ ಸ್ವಾಮೀಜಿ, ಶ್ರೀದುರ್ಗಾಪರಮೇಶ್ವರಿ ಯಜ್ಞಶಾಲಾ ಟ್ರಸ್ಟಿನ ಹಿರಿಯರಾದ ನರಸಿಂಹ, ಜೋತಿರ್ವಿದ್ವಾನ್‌ ಅಜಿತ್‌ ಆಚಾರ್ಯರ ಮಾತೃಶ್ರೀ ಲೀಲಾ ಅಚಾರ್ಯ ಉಪಸ್ಥಿತರಿದ್ದರು.

ಗೌರವ ಸಮರ್ಪಣೆ

ಕಾಂತಾರ ಚಿತ್ರದ ಖ್ಯಾತಿಯ ನಟಿ ವಿದುಷಿ ಮಾನಸಿ ಸುಧೀರ್, ಸಂಗೀತ ನಿರ್ದೇಶಕ ಮತ್ತು ಗಾಯಕ ಯಶವಂತ್‌ ಎಂ.ಜಿ. ಹಾಗೂ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಪ್ರಕಾಶ್‌ ಆಚಾರ್ಯ ಪಡ್ಡಮ್‌ ಇವರಿಗೆ ಗೌರವ ಸಮರ್ಪಣೆ ನೆರವೇರಿಸಲಾಯಿತು.

ಬೆಳಗ್ಗಿನಿಂದ ಸಪ್ತಶತಿ ಪಾರಾಯಣ, ದುರ್ಗಾಹೋಮ, ಪವಮಾನ ಹೋಮ, ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಸಂಜೆ ಪೂಜಾ ಸಂಕಲ್ಪ, ಅಯುತಾರ್ಚನೆ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ನಡೆಯಿತು. ಸಾಂಸ್ಕೃತಿಕ ವೈಭವದಲ್ಲಿ ವಿಠಲ ನಾಯಕ್‌ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ ವೈಭವ ಜರುಗಿತು. ಪ್ರಾರ್ಥನೆಯನ್ನು ಗಣೇಶ್‌ ಆಚಾರ್ಯ ನೆರವೇರಿಸಿದರು. ವಿದ್ವಾನ್‌ ಯಶವಂತ್‌ ಎಂ.ಜಿ. ಸ್ವಾಗತಿಸಿದರು. ಪುರೋಹಿತ್‌ ದಾಮೋದರ ಶರ್ಮ ನಿರೂಪಿಸಿ ವಂದಿಸಿದರು.































































































































error: Content is protected !!
Scroll to Top