ಹೆಬ್ರಿ : ಬೈಕ್‌ಗೆ ಕಾರು ಡಿಕ್ಕಿಯಾಗಿ ಸವಾರ ಆಸ್ಪತ್ರೆ ದಾಖಲಾದ ಘಟನೆ ಫೆ. 12ರಂದು ಹೆಬ್ರಿಯಲ್ಲಿ ಸಂಭವಿಸಿದೆ. ಪ್ರಸಾದ್ ಎಂಬವರು ತಮ್ಮ ಬೈಕ್ (KA-20-EB-1907) ನಲ್ಲಿ ನೆಲ್ಲಿಕಟ್ಟೆ ಕಡೆಯಿಂದ ಸಾಗುತ್ತಿದ್ದಾಗ ಹೆಬ್ರಿ ಕಡೆಯಿಂದ ಅಭಿಷೇಕ್ ಎಂಬವರು ಚಲಾಯಿಸಿಕೊಂಡು (KA-01-MN-0364) ಬರುತ್ತಿದ್ದ ಕಾರು ನೆಲ್ಲಿಕಟ್ಟೆ ಕ್ರಾಸ್‌ನಲ್ಲಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಪ್ರಸಾದ್ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುವನ್ನು ಅಲ್ಲೇ ಇದ್ದ ಅಂಗಡಿಯ ಮಾಲಕ ಶ್ರೀನಿವಾಸ ಎಂಬವರು ಚಿಕಿತ್ಸೆಗಾಗಿ ಹೆಬ್ರಿ ಸಮಯದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬೈಕ್‌ಗೆ ಕಾರು ಡಿಕ್ಕಿ – ಸವಾರ ಆಸ್ಪತ್ರೆ ದಾಖಲು































































