ಬೈಲೂರು : ಡಾ. ಎಂ. ಬಾಲಕೃಷ್ಣ ಆಚಾರ್‌ಗೆ ನಾಗರಿಕ ಸಂಮಾನ

ಅಜೆಕಾರು : ಮೈತ್ರಿ ಸೇವಾ ಸಂಘ (ರಿ.) ಬೈಲೂರು ಇವರ ವತಿಯಿಂದ ಬೈಲೂರು ಗ್ರಾಮಾಂತರ ಭಾಗದಲ್ಲಿ ಐದು ದಶಕದಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಎಂ. ಬಾಲಕೃಷ್ಣ ಆಚಾರ್ ಅವರಿಗೆ ಫೆ. 15ರಂದು ಬೆಳಗ್ಗೆ 10.30ಕ್ಕೆ ಬೈಲೂರು ಅರ್ಚನಾ ಸಭಾಂಗಣದಲ್ಲಿ ನಾಗರಿಕ ಸಂಮಾನ ನಡೆಯಲಿದೆ.
ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೈಲೂರು ಮೈತ್ರಿ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಮಣಿಪಾಲ ಮಾಹೆಯ ಸಹಕುಲಪತಿ ಡಾ.ಎಚ್‌.ಎಸ್. ಬಲ್ಲಾಳ್, ಉಡುಪಿ ಅದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೂಡುಬಿದಿರೆ ಅಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಕಾರ್ಕಳ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ ಅಭಿನಂದನಾ ಭಾಷಣ ಮಾಡಲಿದ್ದಾರೆ.































































































































error: Content is protected !!
Scroll to Top