ಕುಂಭಮೇಳಕ್ಕೆ ಹೊರಟವರು ಟ್ರೆನ್ ಅದಲು ಬದಲಾಗಿ ನಾಪತ್ತೆ

ಕಾರ್ಕಳ : ಕುಂಭಮೇಳಕ್ಕೆಂದು ಹೋಗಿರುವ ಕಾರ್ಕಳ ತಾಲೂಕಿನ ಕಾಬೆಟ್ಟು ಭಾರತ್ ಬೀಡಿ ಕಾಲೋನಿ ವಿ.ಸಿ. ರೋಡ್ ನಿವಾಸಿ ಸುಧಾಕರ್ (69) ಅವರು ಟ್ರೆನ್ ಅದಲು ಬದಲಾಗಿ ನಾಪತ್ತೆಯಾಗಿದ್ದಾರೆ. ಇವರು ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ಮತ್ತು ಕಾಶಿಗೆ ಹೋಗುವುದಾಗಿ ಜ. 25ರಂದು ಮನೆಯಿಂದ ಹೊರಟಿದ್ದು, ಟ್ರೆನ್ ಅದಲು ಬದಲಾಗಿ ಮಾರ್ಗ ತಪ್ಪಿರುವುದಾಗಿ ಮಗ ಶಿವಪ್ರಸಾದ್ ಅವರಿಗೆ ಫೋನ್‌ ಮೂಲಕ ತಿಳಿಸಿದ್ದಾರೆ. ಜ. 27ರಂದು ಶಿವಪ್ರಸಾದ್ ತಂದೆಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ 9686924435 ಅಥವಾ 7259115672 ನಂಬರ್‌ ಸಂಪರ್ಕಿಸುವಂತೆ ವಿನಂತಿಸಲಾಗಿದೆ.





























































































































error: Content is protected !!
Scroll to Top