ಕಾರ್ಕಳ : ಕಂಬಳಕ್ಕೆ ಹೋಗಿ ಬರುತ್ತೇನೆ ಎಂದವರು ಶವವಾಗಿ ಪತ್ತೆಯಾದ ಘಟನೆ ನಿಟ್ಟೆಯಲ್ಲಿ ಸಂಭವಿಸಿದೆ. ನಾರಾಯಣ (46) ಮೃತ ದುರ್ದೈವಿ. ಪಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಸರಿಯಾಗಿ ಔಷಧಿ ಪಡೆಯುತ್ತಿರಲಿಲ್ಲ. ಫೆ. 1 ರಂದು ಐಕಳ ಕಂಬಳಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಂದಿರಲಿಲ್ಲ. ಫೆ. 1ರ ಸಂಜೆ 6 ಗಂಟೆಯಿಂದ ಫೆ. 6ರಂದು ಸಂಜೆ 6 ಗಂಟೆಯ ಮಧ್ಯೆ ಸಮಯದಲ್ಲಿ ಪರಪ್ಪಾಡಿ ಜಂಕ್ಷನ್ ಬಳಿಯಿರುವ ಫೆಲಿಕ್ಸ್ ಎಂಬವರ ವಾಸ ಇಲ್ಲದ ಮನೆಯ ಹಿತ್ತಲಿನಲ್ಲಿ ಪಿಡ್ಸ್ ಖಾಯಿಲೆಯಿಂದ ಬಿದ್ದು ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಮಗ ಶಾಶ್ವತ್ ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಂಬಳಕ್ಕೆ ಹೋಗಿ ಬರುತ್ತೇನೆಂದವರು ಶವವಾಗಿ ಪತ್ತೆ






























































