ಮನೆಯ ಬಾಗಿಲು ಮುರಿದು ಕಳ್ಳತನ – 51 ಸಾ. ರೂ. ಮೌಲ್ಯದ ಸೊತ್ತು ಕಳವು

ಕಾರ್ಕಳ : ಮನೆಯ ಬಾಗಿಲು ಮುರಿದು ಕಳವುಗೈದ ಘಟನೆ ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಮನೆಯ ಮಾಲಕ ಮುಜೀಬ್‌ ರೆಹಮಾನ್‌ ಬೆಂಗಳೂರಿನಲ್ಲಿ ವಾಸವಾಗಿದ್ದು, ತಿಂಗಳಿಗೊಮ್ಮೆ ಕಸಬಾ ಗ್ರಾಮದ ಕಾಬೆಟ್ಟುವಿನಲ್ಲಿರುವ ತನ್ನ ಮನೆ ರೇಶ್ಮಾ ಮಂಜಿಲ್‌ಗೆ ಬಂದು ಹೋಗುತ್ತಿರುತ್ತಾರೆ. ಜ. 1 ಸಂಜೆ 5 ಗಂಟೆಯಿಂದ ಜ. 30 ರಂದು ಸಂಜೆ 5.45 ಗಂಟೆಯ ಮಧ್ಯೆ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಮತ್ತು ಎದುರು ಭಾಗದಲ್ಲಿರುವ ಸೇಫ್‌ಗಾರ್ಡನ್ನು ಮುರಿದು ಒಳಪ್ರವೇಶಿಸಿ, ಕೋಣೆಯಲ್ಲಿ 2 ಕಪಾಟಿನಲ್ಲಿರಿಸಿದ್ದ ನಗದು 30,000/-ರೂ., 15,000/- ರೂ. ಮೌಲ್ಯದ 3 ವಾಚ್‌, 3,000 ರೂ. ಮೌಲ್ಯದ 30 ಗ್ರಾಮ್‌ ತೂಕದ 2 ಬೆಳ್ಳಿಯ ಚೈನ್‌, 3,000/-ರೂ. ಮೌಲ್ಯದ 30 ಗ್ರಾಮ್‌ ತೂಕದ ಬೆಳ್ಳಿಯ ಬ್ರಾಸ್‌ಲೆಟ್‌-1 ನ್ನು ಕಳವು ಮಾಡಿದ್ದಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 51,000/- ರೂ.ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.







































































error: Content is protected !!
Scroll to Top