ಕಾರ್ಕಳ : ಕಾಂಕ್ರಿಟ್ ಕೆಲಸ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುವ ಘಟನೆ ಡಿ. 30ರಂದು ಇರ್ವತ್ತೂರಿನಲ್ಲಿ ಸಂಭವಿಸಿದೆ.
ವಿಠಲ ಎಂಬವರು ರೋಹಿತ್ ಎಂಬವರ ಜೊತೆ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ಡಿ.30ರಂದು ಸುದರ್ಶನ್, ಜಯ ಮತ್ತು ರೋಹಿತ್ ಅವರೊಂದಿಗೆ ಇರ್ವತ್ತೂರು ಗ್ರಾಮ ಪಂಚಾಯತ್ ಕಟ್ಟಡದ ಪಕ್ಕದಲ್ಲಿರುವ ಕಟ್ಟಡದ ಕಾಂಕ್ರಿಟ್ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಭರತ್ ಎಂಬವರು ರೋಹಿತ್ ಅವರ ಜೊತೆ ಜಗಳಮಾಡಿದ್ದು ಜಗಳ ಬಿಡಿಸಲು ಬಂದ ವಿಠಲ ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಸಂಜೆ ಭರತ್ ಮತ್ತು ಭವಿಷತ್ 10 ಜನರೊಂದಿಗೆ ಬಂದು ಏಕಾಏಕಿ ರಾಡ್ ಹಾಗೂ ಕಟ್ಟಿಗೆಯಿಂದ ಜಯ ಮತ್ತು ಸುದರ್ಶನ್ ಅವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ. ಗಾಯಗೊಂಡ ವಿಠಲ, ಸುದರ್ಶನ್ ಮತ್ತು ಜಯ ಅವರು ಚಿಕಿತ್ಸೆಗಾಗಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವಿಠಲ ಅವರರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಇರ್ವತ್ತೂರು : ಕಾಂಕ್ರಿಟ್ ಕೆಲಸ ಮಾಡುತ್ತಿದ್ದವರ ಮೇಲೆ ಹಲ್ಲೆ, ಕೊಲೆ ಬೆದರಿಕೆ, ಜಾತಿ ನಿಂದನೆ






























































