ಕಾರ್ಕಳ : ಥಾಯ್ಲೆಂಡ್‌ನಲ್ಲಿ ಡಿ. 9ರಂದು ನಡೆದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ 29 ಸ್ಪರ್ಧಿಗಳಲ್ಲಿ ಕಾರ್ಕಳ ತಾಲೂಕಿನ ಇಬ್ಬರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 20-30 ವಯೋಮಿತಿಯಲ್ಲಿ ಸುಷ್ಮಾ ತೆಂಡೂಲ್ಕರ್ ಹಾಗೂ 15-20 ವಯೋಮಿತಿಯಲ್ಲಿ ಅನನ್ಯ ದ್ವಿತೀಯ ಸ್ಥಾನಿಯಾಗಿ ಬೆಳ್ಳಿಯ ಪದಕ ಪಡೆದಿದ್ದಾರೆ.
ಸುಷ್ಮಾ ತೆಂಡೂಲ್ಕರ್ ಯರ್ಲಪಾಡಿಯ ದಿ. ಮುಕುಂದ ನಾಯಕ್ ಮತ್ತು ಲತಾ ದಂಪತಿ ಪುತ್ರಿ. ಇವರು ಕಾರ್ಕಳ ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ವಿಭಾಗದಲ್ಲಿ ಸ್ಟಾಫ್ ನರ್ಸ್ ಉದ್ಯೋಗದಲ್ಲಿದ್ದಾರೆ. ಅನನ್ಯ ಹೆರ್ಮುಂಡೆಯ ರಮೇಶ್ ಪೂಜಾರಿ ಮತ್ತು ಸರೋಜಿನಿ ದಂಪತಿಯ ಪುತ್ರಿಯಾಗಿದ್ದು, ಶ್ರೀ ಭುವನೆಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಸುಷ್ಮಾ ತೆಂಡೂಲ್ಕರ್ ಮತ್ತು ಅನನ್ಯಗೆ ಬೆಳ್ಳಿ















































