ಕಾರ್ಕಳ : ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಬೋಳದ ಪ್ರಾಪ್ತಿ ಎಸ್. ಪೂಜಾರಿ ಬಾಲಕಿಯರ 12 ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ಮತ್ತು ಪೈಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಲಕರ 8 ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ಬೋಳ ಆಯುಷ್ ಪೂಜಾರಿ ಭಾಗವಹಿಸಿ ಕಂಚಿನ ಪದಕ ಮತ್ತು ಪೈಂಟಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಇವರಿಬ್ಬರು ಬೆಳ್ಳಣ್ಣು ಲಕ್ಷ್ಮೀ ಜನಾರ್ಧನ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳಾಗಿದ್ದು, ಕಾರ್ಕಳ ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯ ಬೋಳ ಪುಷ್ಪ ಪೂಜಾರಿ ಮತ್ತು ಬೋಳ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೋಳ ದಂಪತಿ ಮಕ್ಕಳು. ಇವರಿಗೆ ಕರಾಟೆ ಶಿಕ್ಷಕ ಸತೀಶ್ ಪೂಜಾರಿ ಬೆಳ್ಳಣ್ಣು ತರಬೇತಿ ನೀಡಿದ್ದಾರೆ.
ರಾಷ್ಟ್ರ ಮಟ್ಟದ ಕರಾಟೆ : ಬೋಳದ ಪ್ರಾಪ್ತಿಗೆ ಚಿನ್ನ – ಆಯುಷ್‌ಗೆ ಕಂಚು
















