ಚುನಾವಣೆ ಸಂದರ್ಭ ಕಾರಿಗೆ ಚೌಕಿದಾರ್‌ ಶೇರ್‌ ಹೇ ಸ್ಟಿಕ್ಕರ್‌ ಅಳವಡಿಸಿದ್ದ ನ್ಯಾಯವಾದಿ

ಕಾರ್ಕಳ : 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾರ್ಕಳದ ಯುವ ನ್ಯಾಯವಾದಿ ಎಂ.ಕೆ. ವಿಫುಲ್‌ ತೇಜ್‌ ಅವರು ಚೌಕಿದಾರ್ ಶೇರ್ ಹೇ ಎಂಬ ಸ್ಟಿಕರ್ ತನ್ನ ಕಾರಿನ ಹಿಂಬದಿಯ ಗ್ಲಾಸ್ ಗೆ ಅಳವಡಿಸಿದ್ದರು. ಇದನ್ನು ನೋಡಿದ ಅಂದಿನ ಕಾರ್ಕಳ ನಗರ ಠಾಣೆ ಎಸ್‌ಐ ನಂಜಾ ನಾಯ್ಕ್‌ ಇದು ಚುನಾವಣೆಯ ನೀತಿ ಸಂಹಿತಿ ಉಲ್ಲಂಘನೆಯೆಂದು ಸ್ಟಿಕರ್ ತೆಗೆಯುವಂತೆ ಸೂಚಿಸಿದ್ದರು. ಈ ವಿಚಾರವಾಗಿ ಎಂ.ಕೆ. ವಿಪುಲ ತೇಜ್ ಅವರು ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕೆ ಅಡ್ಡಿಪಡಿಸಿರುತ್ತಾರೆಂದು ದೂರು ದಾಖಲಿಸಿಕೊಂಡು ಬಂಧನಕ್ಕೆ ಯತ್ನಿಸಿದ್ದರು. ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ಪ್ರಕರಣವು ಆಧಾರ ರಹಿತವೆಂದು ರದ್ದುಪಡಿಸಿದೆ.

ಎಸ್‌ಐಗೆ ದಂಡ
ಮಾನ ಹಾನಿ ಸಂಭವಿಸಿದ ಬಗ್ಗೆ ಎಂ.ಕೆ. ವಿಪುಲ್ ತೇಜ್ ಅವರು ನಂಜಾ ನಾಯ್ಕ್ ಮತ್ತು ಇತರರ ವಿರುದ್ಧ ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದರು. ಈ ದಾವೆಯಲ್ಲಿ ನ್ಯಾಯಾಲಯವು ನಂಜಾ ನಾಯ್ಕ್ ಮತ್ತು ಸರಕಾರ ಜಂಟಿಯಾಗಿ ಹಾಗೂ ಪ್ರತ್ಯೇಕವಾಗಿ 50 ಸಾವಿರ ರೂ. ಆದೇಶದ ದಿನಾಂಕದಿಂದ 2 ತಿಂಗಳೊಳಗಾಗಿ ವಿಪುಲ್ ತೇಜ್ ಅವರಿಗೆ ಪಾವತಿಸಬೇಕೆಂದು ಆದೇಶಿಸಿದೆ.









































































































error: Content is protected !!
Scroll to Top