ಕಾರ್ಕಳ : ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮಿಯ್ಶಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ತಾರಾನಾಥ್ ಕೋಟ್ಯಾನ್ ಸೂರಾಲು ಅವರು ಆಯ್ಕೆಯಾಗಿರುತ್ತಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಅನುಮೋದನೆಗೊಂಡ ನೂತನ ಸಮಿತಿ ಪ್ರಥಮ ಸಭೆಯು ನ. 28ರಂದು ದೇವಳದ ಸಭಾಂಗಣದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ, ಕ್ಷೇತ್ರ ಶಿಕ್ಷಾಣಾಧಿಕಾರಿ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯೂ ನಡೆಯಿತು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್ ಮಿಯ್ಶಾರು, ಉಮೇಶ್ ಕುರ್ಕಲ್ ಪಲ್ಕೆ, ಉಷಾ ಡಿ. ಬಂಗೇರ ಬಜಗೋಳಿ, ಪ್ರಿಯಾ ರೈ ನಲ್ಲೂರು, ಮಾಧವ ಕಾಮತ್ ಮಿಯ್ಶಾರು, ರಮಾಕಾಂತ್ ಶೆಟ್ಟಿ ಕರ್ಮಾರ್ ಕಟ್ಟೆ, ಮಂಜುನಾಥ ನಾಯಕ್ ಕುಂಟಿಬೈಲು, ಸುಕೀರ್ತಿ ಶೆಟ್ಟಿ ಕೊಳಕೆರೆಬೆಟ್ಟು ಈ ಸಂದರ್ಭದಲ್ಲಿದ್ದರು.
ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ತಾರಾನಾಥ್ ಕೋಟ್ಯಾನ್
































































