ಕಾರ್ಕಳ : ಶ್ರೀ ಶೃಂಗೇರಿ ಶಾರದಾ ಮಠದ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾರ್ಕಳ ಇಲ್ಲಿ ತರಬೇತಿ ಪಡೆಯುತ್ತಿರುವ 200 ತರಬೇತುದಾರರಿಗೆ ಪ್ರತಿದಿನ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ನ.28 ರಂದು ಸಂಸ್ಥೆಯ ಪ್ರಾಚಾರ್ಯ ಕೆ.ಎಲ್ ನಾಗರಾಜ್ ಚಾಲನೆ ನೀಡಿದರು.
ಈ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವ ಹೆಚ್ಚಿನ ತರಬೇತುದಾರರು ಆರ್ಥಿಕವಾಗಿ ಬಡ ಹಾಗೂ ಮಧ್ಯಮ ವರ್ಗದವರರಾಗಿದ್ದು ದೂರದ ಹಳ್ಳಿಗಳಿಂದ ಬರುತ್ತಾರೆ. ಈ ಯೋಜನೆಯು ಅವರಿಗೆ ತುಂಬಾ ಉಪಯೋಗವಗಲಿದೆ. ಈ ಯೋಜನೆಯನ್ನು ಸಂಸ್ಥೆಗೆ ನೀಡಿದ ಶ್ರೀ ಶೃಂಗೇರಿ ಶಾರದಾ ಮಠದವರಿಗೆ ಧನ್ಯವಾದಗಳನ್ನು ಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಸಮರ್ಪಿಸಿದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಕ್ಕಳಿಗೆ ಶ್ರೀ ಶೃಂಗೇರಿ ಶಾರದಾ ಮಠದಿಂದ ಭೋಜನ ವ್ಯವಸ್ಥೆ






































