ನಲ್ಲೂರು : ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ

ಕಾರ್ಕಳ : ಹೊಳೆಗೆ ಹಾರಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 27ರಂದು ನಲ್ಲೂರಿನಲ್ಲಿ ಸಂಭವಿಸಿದೆ. ಬೋರ್ಕಟ್ಟೆ ನಿವಾಸಿ ಲೀಲಾ (71) ಆತ್ಮಹತ್ಯೆಗೆ ಶರಣಾದವರು. ಇವರು ಕಳೆದ 7 ವರ್ಷಗಳ ಹಿಂದೆ ಬಿದ್ದು ತಲೆಗೆ ಏಟಾದ ಕಾರಣ ನರ ದೌರ್ಬಲ್ಯದಿಂದ ಬಳಲುತ್ತಿದ್ದರು. ಇದೇ ಕಾರಣವಾಗಿ ಜೀವನದಲ್ಲಿ ಜುಗುಪ್ಸೆಗೊಂಡು ಮನೆಯ ಬಳಿಯಿರುವ ಹೊಳೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



































































































error: Content is protected !!
Scroll to Top