ಶ್ರೀ ಭುವನೇಂದ್ರ ಕಾಲೇಜಿನಲ್ಲಿ ʼಎಕ್ಸ್ಟ್ರಾವೆಗಾಂಝʼ ಸಾಂಸ್ಕೃತಿಕ ಸ್ಪರ್ಧೆ

ಕಾರ್ಕಳ : ಸೋಲನ್ನು ಎದುರಿಸಲು ಕಲಿತಾಗಲೇ ಜೀವನದಲ್ಲಿ ಗೆಲ್ಲಲು ಸಾಧ್ಯ ಎಂದು ಕೆ.ಎಂ.ಇ.ಎಸ್ ಪಿಯು ಕಾಲೇಜು ಪ್ರಾಚಾರ್ಯ ರಾಮಚಂದ್ರ ನೆಲ್ಲಿಕಾರು ಅಭಿಪ್ರಾಯಪಟ್ಟರು. ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಲಲಿತಕಲಾ ಸಂಘದ ಆಶ್ರಯದಲ್ಲಿ ನಡೆದ ಅಂತರ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ “ಎಕ್ಸ್ಟ್ರಾವೆಗಾಂಝ”ವನ್ನು ಉದ್ಘಾಟಿಸಿ ಮಾತನಾಡಿ, ಭುವನೇಂದ್ರ ಕಾಲೇಜು ಮತ್ತು ನನ್ನ ನಡುವೆ ಒಳ್ಳೆಯ ಬಾಂಧವ್ಯದ ನಂಟಿದೆ. ಕಳೆದ ಅಲ್ವತ್ತು ವರ್ಷಗಳಲ್ಲಿ ವಿದ್ಯೆ, ಉದ್ಯೋಗ ಎಲ್ಲವನ್ನೂ ಈ ಕಾಲೇಜು ಕೊಟ್ಟಿದೆ. ಯಾರು ಜೀವನದಲ್ಲಿ ಸೋಲುತ್ತಾರೋ ಅವರು ಯಶಸ್ಸನ್ನು ಗಳಿಸುತ್ತಾರೆ. ಎಕ್ಸ್ಟ್ರಾವೆಗಾಂಝದಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಸೋಲು-ಗೆಲುವನ್ನು ಅರ್ಥೈಸಲು ಸಹಕಾರಿ ಎಂದರು.

ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಕಲಿಕೆಯ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಇನ್ನೂ ಹೆಚ್ಚು ಸದೃಢಗೊಳ್ಳಲು ಸಾಧ್ಯ. ಹಾಗಾಗಿ ನಾವು ಶರೀರ ಮತ್ತು ಮನಸನ್ನು ಯಾವಾಗಲೂ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯ ಎರ್ಮಾಳ್ ಮೋಹನ್ ಶೆಣೈ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ರಮೇಶ್ ಎಸ್.ಸಿ., ಐಕ್ಯೂಎಸಿ ನಿರ್ದೇಶಕ ಪ್ರೊ. ಎಚ್. ಜಿ. ನಾಗಭೂಷಣ್, ಕಾರ್ಯಕ್ರಮದ ಸಂಯೋಜಕ ಪ್ರೊ. ನಂದಕಿಶೋರ್ ಕೆ. ಹಾಗೂ ಸ್ಪರ್ಧೆಗಳ ತೀರ್ಪುಗಾರರಾದ ಮಾಸೂಮ್ ರಾಜ್, ಹರೀಶ್ ಮಲಾರ್, ಸುಶ್ಮಿತಾ ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಸ್ವಾಗತಿಸಿ, ವಿಯೋಲಾ ರೊಸಾರಿಯೋ ಕಾರ್ಯಕ್ರಮ ನಿರೂಪಿಸಿ, ಅದಿತಿ ಕಾರಂತ್ ವಂದಿಸಿದರು.

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್.ಎನ್.ವಿ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರದೀಪ್ ಕುಮಾರ್ ಮಾತನಾಡುತ್ತಾ, ವಿದ್ಯಾರ್ಥಿಗಳು ವೇದಿಕೆಯ ಮೇಲೆ ಪ್ರಸ್ತುತ ಪಡಿಸುವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಯತ್ನದಿಂದ ಸೋತರೂ ಕೂಡಾ ಯಾವತ್ತಾದರೊಂದು ದಿನ ಫಲಿತಾಂಶವನ್ನು ಕೊಟ್ಟೇ ಕೊಡುತ್ತದೆ. ನಾವು ಜೀವನದಲ್ಲಿ ಸದಾ ಭರವಸೆಯಿಡಬೇಕು ಎಂದು ಹೇಳಿದರು.

ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಸುಚೇತ ಕಾಮತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭರವಸೆಯನ್ನು ಹೆಚ್ಚಿಸುವ ಕೆಲಸವನ್ನು ಈ ಸ್ಪರ್ಧೆಗಳು ಮಾಡುತ್ತಿವೆ ಎನ್ನುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಮಂಜುನಾಥ ಕೋಟ್ಯಾನ್ ಮಾತನಾಡಿ, ಪಿಯುಸಿಯಲ್ಲಿ ಕೊಟ್ಟ ಸಂಸ್ಕಾರವೇ ನಮ್ಮ ಪದವಿ ಕಾಲೇಜಿಗೆ ಸ್ಪರ್ಧೆಯ ರೂಪದಲ್ಲಿ ಬಂದಿದೆ. ಇದು ಸಂಸ್ಥೆಯಿಂದ ಸಂಸ್ಥೆಗೆ ಇರುವ ಬಾಂಧವ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ. ಕಲೆ, ಸಾಹಿತ್ಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಾಗ ಅಂತಃಶಕ್ತಿ ಸದಾ ಜಾಗೃತವಾಗುತ್ತದೆ. ದೃಷ್ಟಿಕೋನ ಸರಿಯಾಗಿದ್ದರೆ ಜೀವನದಲ್ಲಿ ಸಫಲತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ಬಹುಮಾನ ವಿತರಣಾ ಕಾರ್ಯಕ್ರಮದ. ವೇದಿಕೆಯಲ್ಲಿ ಐಕ್ಯೂಎಸಿ ನಿರ್ದೇಶಕ ಎಚ್. ಜಿ. ನಾಗಭೂಷಣ್, ವಿದ್ಯಾರ್ಥಿ ಕೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ಕಾರ್ಯಕ್ರಮದ ಸಂಯೋಜಕರಾದ ನಂದಕಿಶೋರ್ ಕೆ., ಸಹ ಸಂಯೋಜಕರಾದ ಕ್ಯಾಪ್ಟನ್ ಶ್ರೀಮೂರ್ತಿ, ಮಹೇಶ್ ಶೆಟ್ಟಿ, ಶಿವಾನಂದ ನಾಯಕ್, ಹರೀಶ್ಚಂದ್ರ, ಮಹೇಶ್ ಪ್ರಭು, ರಾಮದಾಸ ಶೆಟ್ಟಿ, ವಿದುಷಿ ಸುಶ್ಮಿತಾ, ಮಾಸೂಮ್ ರಾಜ್, ಹರೀಶ್ ಮಲಾರ್ ಉಪಸ್ಥಿತರಿದ್ದರು. ದ್ರವ್ಯ ಸಾಗತಿಸಿ, ಲಲಿತಕಲಾ ಸಂಘದ ಸಂಯೋಜಕ ನಂದಕಿಶೋರ್ ವಂದಿಸಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ
ಎಕ್ಷ್ಟ್ರಾವೆಗಾಂಝಾ 2024 ರನ್ನರ್‌ ಅಪ್‌ ಪ್ರಶಸ್ತಿಯನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಪಡೆದುಕೊಂಡಿದ್ದು, ಸಮಗ್ರ ಪಶ್ರಸ್ತಿಯನ್ನು ಪಿ.ಎನ್.ಆರ್. ಅಮೃತಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಮತ್ತು ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜು ಪಡೆದುಕೊಂಡಿದೆ.









































































































error: Content is protected !!
Scroll to Top