ಯಕ್ಷಗಾನದ ಹಾಸ್ಯರಾಜ ಬಂಟ್ವಾಳ ಜಯರಾಮ ಆಚಾರ್ಯ ನಿಧನಕ್ಕೆ ಸುನಿಲ್‌ ಕುಮಾರ್‌ ಸಂತಾಪ

ಕಾರ್ಕಳ : ತೆಂಕುತಿಟ್ಟಿನ ಹಾಸ್ಯ ದಿಗ್ಗಜ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಐವತ್ತು ವರ್ಷಗಳ ಸುದೀರ್ಘ ಯಕ್ಷಗಾನದ ತಿರುಗಾಟ ನಡೆಸಿ ತನ್ನ ಬದುಕಿನ ಉದ್ದಕ್ಕೂ ಕಲಾಭಿಮಾನಿಗಳನ್ನು ರಂಜಿಸುತ್ತ ತಮ್ಮ ಶುದ್ಧ ನವಿರಾದ ಹಾಸ್ಯದೊಂದಿಗೆ, ಮುಖಭಾವದಿಂದಲೇ ಹಾಸ್ಯವನ್ನು ಚಿಮ್ಮಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಅವರು ಇಂದು ತನ್ನ ಬದುಕಿಗೆ ಮಂಗಳ ಹಾಡಿ ಇಹಲೋಕ ತ್ಯಜಿಸಿದ್ದಾರೆ. ಅನೇಕ ಪ್ರತಿಷ್ಠಿತ ಯಕ್ಷಗಾನ ಮೇಳಗಳಲ್ಲಿ ಸುದೀರ್ಘವಾಗಿ ಸೇವೆಯನ್ನು ಮಾಡಿದ ಹಿರಿಮೆ ಜಯರಾಮ ಆಚಾರ್ಯರವರದ್ದಾಗಿದೆ. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ. ಸುನಿಲ್‌ ಕುಮಾರ್‌ ಸಂತಾಪ ಸೂಚಿಸಿದ್ದಾರೆ.





























































































































error: Content is protected !!
Scroll to Top