ಬೈಕ್‌ಗೆ ಕಾರು ಡಿಕ್ಕಿ – ಸವಾರರಿಬ್ಬರಿಗೆ ಗಾಯ

ಕಾರ್ಕಳ : ಬೈಕ್‌ಗೆ ಕಾರು ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಅ. 20ರಂದು ಕುಕ್ಕುಂದೂರಿನಲ್ಲಿ ಸಂಭವಿಸಿದೆ. ಮುಲ್ಕಿಯ ಪ್ರತೀಕ್‌ ಅವರು ಸ್ನೇಹಿತ ಕಿರಣ್‌ ಎಂಬವರೊಂದಿಗೆ ಸಹ ಸವಾರನಾಗಿ ಬೈಕ್‌ನಲ್ಲಿ ಕುಳಿತುಕೊಂಡು ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡು ಕ್ರಾಸ್‌ನಲ್ಲಿ ಕಾರ್ಕಳ ಕಡೆಗೆ ಬರುತ್ತಿರುವಾಗ KA-20-MC-7418ನೇ ನಂಬ್ರದ ಕಾರನ್ನು ಅದರ ಚಾಲಕ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್‌‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಬೈಕ್‌ ಸವಾರ ಕಿರಣ್ ಅವರ ತಲೆ ಹಾಗೂ ಕೈ ಕಾಲುಗಳಿಗೆ ಗಂಭಿರ ಸ್ವರೂಪದ ಗಾಯವಾಗಿರುತ್ತದೆ. ಹಿಂಬದಿ ಸವಾರ ಪ್ರತೀಕ್‌ ಅವರೂ ಗಾಯಗೊಂಡಿರುತ್ತಾರೆ. ಗಾಯಾಳುಗಳು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಪ್ರತೀಕ್‌ ಅವರು ನೀಡಿದ ಮಾಹಿತಿಯಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top