ಅಜೆಕಾರು : ಗೇರುಬೀಜ ಕಂಪನಿಗೆ 18 ಲ. ರೂ. ವಂಚನೆ

ಅಜೆಕಾರು : ಅಜೆಕಾರಿನ ಭ್ರಾಹ್ಮರಿ ಕ್ಯಾಶ್ಯೂ ಇಂಡಸ್ಟ್ರಿಸ್‌ ಮಾಲಕಿ ಶಿರ್ಲಾಲು ಗ್ರಾಮದ ಪ್ರವೀಣಾ ಅವರಿಗೆ ನವಿಮುಂಬಯಿಯ ಮಹಾವೀರ್‌ ಟ್ರೇಡಿಂಗ್‌ ಕಂಪನಿಯ ಮಾಲಕಿ ಭಾರತಿ ಸಾವ್ಲ ಮತ್ತು ಅವರ ಗಂಡ ನೀಲೇಶ್‌ ಸಾವ್ಲ, ಭಾರತಿಯ ಸಹೋದರ ಪಿಯುಶ್‌ ಗೋಗ್ರಿ ಗೇರುಬೀಜ ವ್ಯವಹಾರದಲ್ಲಿ 18,43,380 ರೂ. ವಂಚಿಸಿದ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳು ಮಂಗಳೂರಿನ ಏಜೆಂಟ್‌ ನಿಖಿಲ್‌ ಎನ್‌. ಥಾಕರ್‌ ಎಂಬಾತನ ಮುಖಾಂತರ ಪ್ರವೀಣಾ ಅವರನ್ನು ಸಂಪರ್ಕಿಸಿ 2023ರ ಅಕ್ಟೋಬರ್‌ 10ರಂದು 18,43,380 ರೂ. ಮೌಲ್ಯದ ಗೇರುಬೀಜ ಉತ್ಪನ್ನಗಳಿಗೆ ಆರ್ಡರ್‌ ಕೊಟ್ಟಿದ್ದರು. ಆ ಪ್ರಕಾರ ನವಿಮುಂಬಯಿಗೆ ಉತ್ಪನ್ನಗಳನ್ನು ಸಾಗಿಸಲಾಗಿತ್ತು. ಆದರೆ ಆರೋಪಿಗಳು ಹಣ ಪಾವತಿಗೆ ಸಮಯಾವಕಾಶ ಕೇಳಿದ್ದು, ಪ್ರವೀಣಾ ಅವರು ಇದಕ್ಕೆ ಒಪ್ಪಿದ್ದರು. ಎರಡು ತಿಂಗಳು ಬಿಟ್ಟು ಕರೆಮಾಡಿದಾಗ ಆರೋಪಿಗಳು ಕರೆ ಸ್ವೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ಮೋಸ ಮಾಡಿದ ಕುರಿತು ಪ್ರವೀಣಾ ಅವರು ದೂರು ದಾಖಲಿಸಿದ್ದಾರೆ.





























































































































error: Content is protected !!
Scroll to Top