ಕುಕ್ಕುಂದೂರು : ಕಾರು ಪಲ್ಟಿಯಾಗಿ ಇಬ್ಬರಿಗೆ ಗಾಯ

ಕಾರ್ಕಳ: ಕಾರ್ಕಳ-ಉಡುಪಿ ರಸ್ತೆಯ ಕುಕ್ಕುಂದೂರು ಗ್ರಾಮದ ದೇವಿಕೃಪಾ ಹಾಲ್ ಬಳಿ ನಿನ್ನೆ ರಾತ್ರಿ ಕಾರು ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದಾರೆ.
ಕಾರು ಕಾರ್ಕಳದಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ.
ಭಾರಿ ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಚರಂಡಿ ದಾಟಿ ಪಲ್ಟಿಯಾಗಿದೆ. ಅಪಘಾತವನ್ನು ಸ್ಥಳೀಯ ಓರ್ವ ವ್ಯಕ್ತಿ ನೋಡಿ ಕುಕ್ಕುಂದೂರು ಭರತ್ ಶೆಟ್ಟಿಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಭರತ್‌ ಶೆಟ್ಟಿಯವರು ಕೆಲವರೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ.
ಕಾರು ರಸ್ತೆಯಿಂದ ಸುಮಾರು 20 ಅಡಿ ದೂರ ಹಾರಿಹೋಗಿತ್ತು. ಕಾರಿನಲ್ಲಿದ್ದವರು ಒಳಗೆ ಸಿಲುಕಿಕೊಂಡು ಎದ್ದೇಳದ ಸ್ಥಿತಿಯಲ್ಲಿದ್ದರು.
ಕಾರಿನಲ್ಲಿದ್ದ ಮೂವರ ಪೈಕಿ ಓರ್ವ ಯುವಕ ಎರ್ಲಪ್ಪಾಡಿಯವರು. ಉಳಿದಿಬ್ಬರು ಉಡುಪಿಯವರು ಎಂದು ತಿಳಿದುಬಂದಿದೆ. ಗಾಯಗೊಂಡ ಇಬ್ಬರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರ್ಲಪ್ಪಾಡಿಯ ಯುವಕನಿಗೆ ಹೆಚ್ಚು ಗಾಯವಾಗಿಲ್ಲ. ಕರಿಕರಿ ಫ್ರೆಂಡ್ಸ್‌ ambulanceನಲ್ಲಿ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.





























































































































error: Content is protected !!
Scroll to Top