ಕಾರ್ಕಳ : ಬೈಕ್‌ಗಳು ಡಿಕ್ಕಿಯಾಗಿ ಸವಾರ ಆಸ್ಪತ್ರೆ ದಾಖಲಾದ ಘಟನೆ ಆ. 20ರಂದು ಸಂಭವಿಸಿದೆ. ಕಸಬಾ ಗ್ರಾಮದ ಕಾಬೆಟ್ಟು ಜಂಕ್ಷನ್ ದ್ವಾರದ ಬಳಿ ಮಧ್ಯಾಹ್ನ 3.45 ಗಂಟೆಗೆ ಜೋಡುರಸ್ತೆಯಿಂದ ಪುಲ್ಕೇರಿ ಕಡೆಗೆ ಪಂಚಮ್ ಎಂಬವರು ಬೈಕ್ ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಅತ್ತೂರು ಚರ್ಚ್ ಕಡೆಯಿಂದ ಅರುಣ್ ಕುಮಾರ್ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಪರಿಣಾಮವಾಗಿ ಪಂಚಮ್ ಬೈಕ್ ಸಮೇತ ರಸ್ತೆಗೆ ಬಿದ್ದು ತೀವ್ರ ಸ್ವರೂಪದಲ್ಲಿ ಗಾಯಗೊಂಡಿರುತ್ತಾರೆ. ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ಅರುಣ್ ಕುಮಾರ್ ಸಹ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಬೆಟ್ಟು : ಬೈಕ್‌ಗಳು ಡಿಕ್ಕಿ – ಸವಾರ ಆಸ್ಪತ್ರೆ ದಾಖಲು






























































