ಕಾರ್ಕಳ : ಕಲ್ಯಾ ಗ್ರಾಮ ಪಂಚಾಯತ್ ವತಿಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆಯಡಿಯಲ್ಲಿ ಕೃಷಿ ಇಲಾಖೆ ಉಡುಪಿ ಹಾಗು ಸಿಡಾಕ್ ಸಂಸ್ಥೆ ಉಡುಪಿ ಇವರ ಪ್ರಾಯೋಜಕತ್ವಡಿಯಲ್ಲಿ ನಡೆಯುವ ಕಸೂತಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಆ. 20ರಂದು ಕಲ್ಯಾ ಪಂಚಾಯತ್‌ನಲ್ಲಿ ಜರುಗಿತು. ಪಂಚಾಯತ್ ಉಪಾಧ್ಯಕ್ಷ ಹರಿಜೀವನ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೃಷಿ ಅಧಿಕಾರಿ ಸಿದ್ಧಪ್ಪ, ಜಲನಯನ ಸಹಾಯಕ ದಿಲೀಪ, ಪಂಚಾಯತ್ ಸದಸ್ಯ ಜಗದೀಶ, ತರಬೇತುದಾರರಾದ ಸಂಧ್ಯಾ ಒಕ್ಕೂಟದ ಅಧ್ಯಕ್ಷೆ ಸುಮನ ಹರೀಶ್, ಉಪಾಧ್ಯಕ್ಷೆ ಸರಿತಾ, ಪೃಥ್ವಿರಾಜ್ ನಾಯಕ್ ಉಪಸ್ಥಿತರಿದ್ದರು. ಕುಂಟಾಡಿ ರಕ್ತೇಶ್ವರಿ ದೇವಸ್ಥಾನದಲ್ಲಿ ತರಬೇತಿ ನಡೆಯುತ್ತಿದೆ.
ಕಲ್ಯಾ : 10 ದಿನಗಳ ಕಸೂತಿ ತರಬೇತಿಗೆ ಚಾಲನೆ
























