ಪ್ರೀತಿಯ ಹೆಂಡತಿಯ ಮುನಿಸು ಗೂಗಲ್ ಮ್ಯಾಪ್ ಸಂಶೋಧನೆಗೆ ಕಾರಣ ಆಯ್ತು!

ಸಾಧಾರಣವಾಗಿ ಅನಿವಾರ್ಯತೆಯು ಸಂಶೋಧನೆಗಳ ತಾಯಿ (Neccessity is the mother of inventions)ಎನ್ನುತ್ತಾರೆ. ಆದರೆ ಗೂಗಲ್ ಮ್ಯಾಪ್ ಎಂಬ ಆಧುನಿಕ app ಸಂಶೋಧನೆಯ ಹಿಂದೆ ಬೇರೆಯೇ ಕಾರಣ ಇದೆ. ಏನದು? ಓದುತ್ತಾ ಹೋಗಿ.

ಸುಂದರ ಪಿಚೈ ಯಾರಿಗೆ ಗೊತ್ತಿಲ್ಲ ಹೇಳಿ? ಗೂಗಲ್ ಕಂಪನಿಯ ಸಿಇಒ ಆಗಿ ಆ ಕಂಪನಿಯನ್ನು ಭಾರಿ ಎತ್ತರಕ್ಕೆ ಬೆಳೆಸಿದವರು. ಅವರ ಬದುಕಿನಲ್ಲಿ ನಡೆದ ಒಂದು ಘಟನೆ ಒಂದು ಮಹಾನ್ ಸಂಶೋಧನೆಗೆ ಕಾರಣ ಆಯಿತು ಅಂದರೆ ನಂಬಲೇ ಬೇಕು.

2004ರ ಹೊತ್ತಿಗೆ ಸುಂದರ ಪಿಚೈ ಅವರನ್ನು ಅವರ ಫ್ರೆಂಡ್ ಒಬ್ಬರು ಒಂದು ರಾತ್ರಿಯ ಊಟಕ್ಕೆ ಕುಟುಂಬ ಸಮೇತ ಬರುವಂತೆ ಮನೆಗೆ ಕರೆದಿದ್ದರು. ಸುಂದರ ಪಿಚೈ ಅವರಿಗೆ ಆಫೀಸಲ್ಲಿ ತುರ್ತು ಕೆಲಸ ಇದ್ದ ಕಾರಣ ಹೆಂಡತಿ ಅಂಜಲಿಗೆ ಸಂಜೆ ಮುಂಚಿತವಾಗಿ ಹೋಗಲು ಹೇಳಿ ತಾನು ಸ್ವಲ್ಪ ತಡವಾಗಿ ಸೇರುತ್ತೇನೆ ಎಂದು ಹೇಳಿದ್ದರು. ಪ್ಲಾನ್ ಮಾಡಿದ ಪ್ರಕಾರ ಆಫೀಸಿನಿಂದ ಸರಿಯಾದ ಸಮಯಕ್ಕೆ ಅವರು ಸಂಜೆ ಹೊರಟಿದ್ದರು. ಆದರೆ ಸಮಯಕ್ಕೆ ಬಹಳವೇ ಪ್ರಾಶಸ್ತ್ಯ ಕೊಡುತ್ತಿದ್ದ ಅವರಿಗೆ ಅಂದು ದಾರಿ ತಪ್ಪಿತು.

ಅಮೆರಿಕದ ಅಡ್ಡಡ್ಡ ರಸ್ತೆಗಳಲ್ಲಿ ದಾರಿ ತಪ್ಪಿದ ಅವರು ಫ್ರೆಂಡ್ ಮನೆಗೆ ತಲುಪಿದಾಗ ರಾತ್ರಿ ಹತ್ತು ಗಂಟೆ ದಾಟಿತ್ತು. ಊಟ ಮುಗಿಸಿ ಎಲ್ಲ ಅತಿಥಿಗಳು ಮನೆಗೆ ಹೋಗಿ ಆಗಿತ್ತು. ಅವರ ಹೆಂಡತಿ ಅಂಜಲಿ ಕೂಡಾ ಊಟ ಮುಗಿಸಿ ಮನೆಗೆ ಹೋಗಿ ಆಗಿತ್ತು. ಪಾತ್ರೆಗಳೆಲ್ಲ ಖಾಲಿ ಖಾಲಿ. ತೀವ್ರ ಹಸಿದ ಹೊಟ್ಟೆಯಲ್ಲಿ ಸುಂದರ್ ಮನೆಗೆ ಬಂದಾಗ ಹೆಂಡತಿ ತನ್ನ ಮನೆಯ ಪಾತ್ರೆ ಕೂಡ ತೊಳೆದು ಆಗಿತ್ತು. ಅಡುಗೆಯವರು ಮನೆಗೆ ಹೋಗಿ ಆಗಿತ್ತು.

ಹೆಂಡತಿ ಅಂಜಲಿಗೆ ಸಿಟ್ಟು ಬಂದು ಮುಖ ತಿರುಗಿಸಿ ಮಲಗಿ ತುಂಬಾ ಹೊತ್ತಾಗಿತ್ತು. ಆಕೆಯು ಗಂಡನನ್ನು ತುಂಬ ಉತ್ಕಟವಾಗಿ ಪ್ರೀತಿ ಮಾಡುವ ಪತ್ನಿ ಆಗಿದ್ದರು. ಆದರೆ ಅಂದು ಆಕೆಯ ಸಿಟ್ಟು ಸಕಾರಣ ಆಗಿತ್ತು. ಅವರನ್ನು ಎಬ್ಬಿಸಲು ಸುಂದರ್ ಅವರಿಗೆ ಮನಸ್ಸು ಆಗಲಿಲ್ಲ. ಪರಿಣಾಮವಾಗಿ ಜೀವನದಲ್ಲಿ ಮೊದಲ ಬಾರಿಗೆ ಊಟವಿಲ್ಲದೆ ಕಳೆಯಬೇಕಾಯಿತು.

ಸುಂದರ್ ಪಿಚ್ಚೈ ನಿದ್ದೆ ಹಾರಿಹೋಗಿತ್ತು

ಅವರಿಗೆ ನಿದ್ದೆ ಬರಲಿಲ್ಲ. ಮಧ್ಯರಾತ್ರಿ ಸ್ವತಃ ಕಾರ್ ಡ್ರೈವ್ ಮಾಡಿಕೊಂಡು ಆಫೀಸಿಗೆ ಬಂದರು. ಬೆಳಗ್ಗಿನ ತನಕವೂ ಯೋಚನೆ ಮಾಡುತ್ತಾ ಕಳೆದರು. ಹೆಂಡತಿಯನ್ನು ತುಂಬಾ ಪ್ರೀತಿ ಮಾಡುತ್ತಿದ್ದ ಸುಂದರ್ ಅಂದು ರಾತ್ರಿ ಹೆಂಡತಿಯ ಮುನಿಸಿನಿಂದ ತುಂಬಾ ಡಿಸ್ಟರ್ಬ್ ಆಗಿದ್ದರು. ನಾನು ಹೋಗಬೇಕಾಗಿದ್ದ ಫ್ರೆಂಡ್ ಮನೆಯ ಅಡ್ರೆಸ್ ಸರಿ ಇದ್ದು, ಹೋಗಬೇಕಾದ ರೂಟ್ ಸರಿಯಾಗಿ ಗೊತ್ತಿದ್ದರೆ ಆ ಕಷ್ಟಪಡುವ ಅಗತ್ಯ ಇರಲಿಲ್ಲ ಎಂಬ ಯೋಚನೆ ಅವರ ಮನದಲ್ಲಿ ಕೊರೆಯುತ್ತಿತ್ತು.

ಮರುದಿನ ಅವರು ತನ್ನ ಗೂಗಲ್ ಸಂಸ್ಥೆಯ ಹಿರಿಯ ತಂತ್ರಜ್ಞರ ತುರ್ತು ಸಭೆ ಕರೆದರು. ಜಗತ್ತಿನ ಎಲ್ಲ ಸ್ಥಳಗಳಿಗೆ ದಾರಿಯನ್ನು ತೋರಿಸುವ ಒಂದು ಆಧುನಿಕ ತಂತ್ರಜ್ಞಾನದ ಅಗತ್ಯವನ್ನು ಅವರ ಮುಂದೆ ಇಟ್ಟರು. ಎರಡೆರಡು ದಿನ ಮ್ಯಾರಥಾನ್ ಮೀಟಿಂಗ್ ಮುಂದುವರಿಯಿತು. ಕೊನೆಗೂ ಸುಂದರ್ ಪಿಚೈ ಅವರ ಹೆಂಡತಿಯ ಪ್ರೀತಿ ಗೆದ್ದಿತು. ಗೂಗಲ್ ಕಂಪನಿಯ ಎಲ್ಲ ತಂತ್ರಜ್ಞರು ಸಮರೋಪಾದಿಯಲ್ಲಿ ಕೆಲಸ ಮಾಡಲು ಒಪ್ಪಿದರು.

ಆ ಕೆಲಸವು ಸುಲಭದ್ದು ಆಗಿರಲಿಲ್ಲ

ಆಗ ಉಪಗ್ರಹ ತಂತ್ರಜ್ಞಾನ ತುಂಬ ಅಡ್ವಾನ್ಸ್ ಆಗಿತ್ತು. ಜಗತ್ತಿನ ಎಲ್ಲ ಸ್ಥಳಗಳ ನಕ್ಷೆಗಳನ್ನು ಪಡೆಯಲು ಸಾಧ್ಯ ಇತ್ತು. ಅದನ್ನು ಒಂದು app ಆಗಿ ಗೂಗಲ್‌ಗೆ ಜೋಡಿಸುವುದು ಕಷ್ಟವೇ ಆಗಿತ್ತು. ಭೂಮಾರ್ಗ, ಜಲಮಾರ್ಗ ಹಾಗೂ ವಾಯುಮಾರ್ಗ ಎಲ್ಲದಕ್ಕೂ ನಕ್ಷೆ ಸಿದ್ಧಪಡಿಸಬೇಕಾಗಿತ್ತು. ಈ ಸವಾಲಿನ ಕೆಲಸಕ್ಕೆ ಹಲವು ವರ್ಷಗಳು ಬೇಕಾದವು.

ಆಗ ಹುಟ್ಟಿದ್ದೇ ಗೂಗಲ್ ಮ್ಯಾಪ್

ಗೂಗಲ್ ಮ್ಯಾಪ್ 2005ರಲ್ಲಿ ಅಮೆರಿಕದಲ್ಲಿ ಜನಪ್ರಿಯ ಆಯಿತು. ಮುಂದಿನ ವರ್ಷವೇ ಇಂಗ್ಲೆಂಡಿಗೆ ಹೋಯಿತು. 2008ರಲ್ಲಿ ಭಾರತಕ್ಕೂ ಬಂತು. ಮುಂದೆ ಒಂದೆರಡು ವರ್ಷಗಳಲ್ಲಿ ಗೂಗಲ್ ಮ್ಯಾಪ್ ಇಡೀ ಜಗತ್ತನ್ನು ತಲುಪಿತು. ಉಪಗ್ರಹಗಳ ಸಹಾಯ ಪಡೆದು ಇಡೀ ಜಗತ್ತಿನ ನಕ್ಷೆಯನ್ನು ರಚನೆ ಮಾಡಿ ಗೂಗಲ್ ಮ್ಯಾಪ್ ಕೆಲಸವನ್ನು ಆರಂಭಿಸಿತು. ಅದು ಸಾರಿಗೆ ಮತ್ತು ಟೂರಿಸಂ ಉದ್ಯಮಗಳಲ್ಲಿ ಕ್ರಾಂತಿಯನ್ನೇ ಮಾಡಿತು.

ಒಬ್ಬ ಸಾಮಾನ್ಯ ಕ್ಯಾಬ್ ಡ್ರೈವರ್, ರಿಕ್ಷಾ ಡ್ರೈವರ್, ಟ್ಯಾಕ್ಷಿ ಡ್ರೈವರ್ ತನ್ನ ಮೊಬೈಲನಲ್ಲಿ ಗೂಗಲ್ ಮ್ಯಾಪ್ ತೆರೆದಿಟ್ಟು ನಿಮ್ಮನ್ನು ನೀವು ತಲುಪಬೇಕಾದ ಗಮ್ಯಕ್ಕೆ ತಲುಪಿಸುವ ಅದ್ಬುತವಾದ ತಂತ್ರಜ್ಞಾನವೇ ಗೂಗಲ್ ಮ್ಯಾಪ್. ಇಂದು ಜಗತ್ತಿನ ಏಳು ಜನರಲ್ಲಿ ಒಬ್ಬರು ಗೂಗಲ್ ಮ್ಯಾಪನ್ನು ಉಪಯೋಗ ಮಾಡುತ್ತಿದ್ದಾರೆ.

ಭೂಮಾರ್ಗ, ಜಲಮಾರ್ಗ, ವಾಯುಮಾರ್ಗ ಎಲ್ಲ ಕಡೆ ಇಂದು ಗೂಗಲ್ ಮ್ಯಾಪ್ ಸಹಾಯ ಮಾಡುತ್ತಿದೆ.
ಈ ಸಂಶೋಧನೆಗೆ ಸ್ಫೂರ್ತಿ ಯಾವುದು?ಎಂದು ಸುಂದರ ಪಿಚೈ ಅವರನ್ನು ಕೇಳಿದಾಗ ಅವರು ಹೇಳಿದ್ದು ಒಂದೇ ವಾಕ್ಯ,
‘ತುಂಬಾ ಪ್ರೀತಿಸುವ ಹೆಂಡತಿಯ ಮುನಿಸು!’





























































































































error: Content is protected !!
Scroll to Top