ಕಾರ್ಕಳ : ನಿಟ್ಟೆ ಗ್ರಾಮ ಆಸ್ವಲ್ಡ್ ಕಿಶೋರ್ ಅವರ ಮಗ ಕ್ಲಿಫರ್ಡ್ ಮೆಲ್ರಾಯ್ (33) ಅವರು ಆ. 12ರಂದು ಬೆಳಿಗ್ಗೆ 9.30ಕ್ಕೆ ಮನೆಯಿಂದ ಪಡುಬಿದ್ರೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಟಿವಿಎಸ್ ಎಕ್ಸ್ ಎಲ್ ದ್ವಿಚಕ್ರ ವಾಹನ KA-20-EG-0470 ರಲ್ಲಿ ಹೋಗಿದ್ದು ವಾಪಾಸು ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇವರು ಕಾಣಸಿಕ್ಕಿದ್ದಲ್ಲಿ 9480805462 (ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ) ಅಥವಾ 9480805435 (ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು) ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ.
ನಿಟ್ಟೆ ಗ್ರಾಮದ ವ್ಯಕ್ತಿ ನಾಪತ್ತೆ









































