ಹೆಬ್ರಿ : ಕಾರುಗಳ ಮುಖಾಮುಖಿ ಡಿಕ್ಕಿ

ಹೆಬ್ರಿ : ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಪ್ರಯಾಣಿಕರೊಬ್ಬರು ಗಾಯಗೊಂಡಿರುವ ಘಟನೆ ಆ. 2ರಂದು ನಾಡ್ಪಾಲಿನಲ್ಲಿ ಸಂಭವಿಸಿದೆ.
ಸಕ್ರಿಯಾಸ್‌ ಕೊಂಡಕ್ಕಚರ ಜಾಯ್ ಎಂಬವರು ತಮ್ಮ ತಾಯಿ ಶೈನಿ ಹಾಗೂ ಮಾವ ಮತ್ತಾಯಿಯವರೊಂದಿಗೆ ವೇಣೂರಿಗೆ ಹೋಗುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ 169ಎ ನಲ್ಲಿ ಕಾರು ಚಲಾಯಿಸಿಕೊಂಡು ನಾಡ್ಪಾಲು ಗ್ರಾಮದ ಕಾಡಿನ ಮನೆ ಹೋಟೆಲ್‌ ಬಳಿ ತಲುಪುವಾಗ ಮುಂಭಾಗದಲ್ಲಿ ಹೆಬ್ರಿ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಶೈನಿಯವರು ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top