ಕಾರ್ಕಳ : ಸೇವಾ ನಿವೃತ್ತಿ ಹೊಂದಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ನಾಯ್ಕ್ ಅವರಿಗೆ ಕಾರ್ಕಳ ತಾಲೂಕು ಮೋಟಾರು ವಾಹನ ಡ್ರೈವಿಂಗ್ ಸ್ಕೂಲ್ ಮಾಲಕರ ವತಿಯಿಂದ ಆ. 1ರಂದು ಕಾರ್ಕಳ ಪ್ರವಾಸಿ ಮಂದಿರದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ನೇಮಿರಾಜ ಅರಿಗ ವಹಿಸಿದ್ದರು. ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯ್ಕ್, ಹಿರಿಯ ಮೋಟಾರು ವಾಹನ ನಿರೀಕ್ಷಕ ಸಂತೋಷ ಶೆಟ್ಟಿ, ಮೋಟಾರು ವಾಹನ ನಿರೀಕ್ಷಕ ಮಾರುತಿ ನಾಯ್ಕ್, ಶಾಂತಲಾ ವಿಶ್ವನಾಥ್ ನಾಯ್ಕ, ರಾಜೇಶ್ ಶೇಟ್, ಗೋಪಾಲ ಪೈ, ಕಾರ್ಕಳ ತಾಲೂಕು ಮೋಟಾರು ವಾಹನ ಡ್ರೈವಿಂಗ್ ಸ್ಕೂಲ್ ಮಾಲಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರಘುರಾಮ ಭಟ್ ಹಾಗೂ ನರೇಂದ್ರ ಪ್ರಭು ಪ್ರಾರ್ಥಿಸಿದರು. ಅಂಬಾಪ್ರಸಾದ್ ಪಿ. ಸ್ವಾಗತಿಸಿ, ರಘುರಾಮ ಭಟ್ ವಂದಿಸಿದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ನಾಯ್ಕ್ ಅವರಿಗೆ ಬೀಳ್ಕೊಡುಗೆ






























































