ಕಾರ್ಕಳ: ಯಕ್ಷತೀರ್ಥ ಕಲಾಸೇವೆ ನೂರಾಳ್ಬೆಟ್ಟು ಇದರ ಐದನೇ ವರ್ಷದ ಯಕ್ಷ ತೀರ್ಥ ಸಂಭ್ರಮ-2024ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮುಂಬಯಿಯ ಮಲಾಡ್ ಪೂರ್ವ ಕುರಾರ್ ವಿಲೇಜ್ನಲ್ಲಿರುವ ಮಹತೋಭಾರ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ನಡೆಯಿತು.
ಕ್ಷೇತ್ರದ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಬೊರಿವಿಲಿ, ಉಪಾಧ್ಯಕ್ಷ ರಮೇಶ್ ಎ. ಆಚಾರ್ಯ ಕಾಂದಿವಿಲಿ, ವಿಶ್ವನಾಥ್ ಶೆಟ್ಟಿ ಪೇತ್ರಿ, ರಂಗ ಕಲಾವಿದ ಅಶೋಕ್ ಕೊಡ್ಯಡ್ಕ, ಕಲಾ ಪೋಷಕರಾದ ನಕ್ರೆ ಸದಾನಂದ ಆಚಾರ್ಯ ಜೋಗೀಶ್ವರಿ, ಸಂತೊಷ್ ಆಚಾರ್ಯ ವಾಶಿ (ಕೆರ್ವಾಶೆ), ಹರೀಶ್ ಸಾಲ್ಯಾನ್ ಮಿರಾರೋಡ್, ಸಂತೋಷ್ ಶೆಟ್ಟಿ ಮಲಾಡ್ ಆಗಸ್ಟ್ 25ರಂದು ನಾರಾವಿ ಧರ್ಮಶ್ರೀ ಸಭಾಂಗಣದಲ್ಲಿ ನಡೆಯಲಿರುವ ಯಕ್ಷ ತೀರ್ಥ ಸಂಭ್ರಮ-2024 ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಯಕ್ಷತೀರ್ಥ ಕಲಾಸೇವೆ ಇದರ ಆಯೋಜಕ ಸದಾನಂದ ಎಸ್. ಆಚಾರ್ಯ ನೂರಾಳ್ಬೆಟ್ಟು, ಜಿ.ಎಸ್. ಪುರಂದರ ಪುರೋಹಿತ ಮುನಿಯಾಲು, ವಾಮನ ಆಚಾರ್ಯ ನೂರಾಳ್ಬೆಟ್ಟು, ಗಣೇಶ್ ಆಚಾರ್ಯ ಗಂಗೆನೀರ್ ಹೊಸ್ಮಾರು, ವಸಂತ್ ಧನಲಕ್ಷ್ಮಿ ನಾರಾವಿ, ಉಪಸ್ಥಿತರಿದ್ದರು.
ಯಕ್ಷ ತೀರ್ಥ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ






























































