ಕಾರ್ಕಳ : ಸಮಾಜ ಸೇವಕ, ಧಾರ್ಮಿಕ ಚಿಂತಕ, ಉದ್ಯಮಿ ಕೊಕ್ರಾಡಿ ದೇವೇಂದ್ರ ಹೆಗ್ಡೆ ಅವರಿಗೆ ಗಣ್ಯರ ಉಪಸ್ಥಿಯಲ್ಲಿ ಆರ್ಯಭಟ 2024 ಪ್ರಶಸ್ತಿ ಪ್ರದಾನಿಸಲಾಯಿತು.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕೊಕ್ರಾಡಿ ದೇವೇಂದ್ರ ಹೆಗ್ಡೆ ದ.ಕ ಜಿಲ್ಲಾ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಉಮಾ ಮಹೇಶ್ವರ ದೇವಸ್ಥಾನ, ಮರೋಡಿ ಇದರ ಆಡಳಿತ ಮೊಕ್ತೇಸರ, ತುಳುಕೂಟ ಬೆಂಗಳೂರು ಇದರ ಮಾಜಿ ಅಧ್ಯಕ್ಷ, ಹೆಗ್ಗಡೆ ಸೇವಾ ಸಂಘ ಬೆಂಗಳೂರು ಇದರ ಮಾಜಿ ಅಧ್ಯಕ್ಷ, ಶ್ರೀ ವೀರಮಾರುತಿ ದೇವಸ್ಥಾನ ಕೋಟೆಬಾಗಿಲು ಮೂಡುಬಿದಿರೆ ಇದರ ಮಾಜಿ ಆಡಳಿತ ಮೊಕ್ತೇಸರ, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಇದರ ಉಪಾಧ್ಯಕ್ಷ, ಕೊಕ್ರಾಡಿ ಹೇರದಂಡಿ ಬಾಕ್ಯಾರು ಶ್ರೀ ಕೊಡಿಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಇದರ ಉಪಾಧ್ಯಕ್ಷರಾಗಿ ನಿರಂತರ ಸಮಾಜ ಸೇವೆ ಮಾಡಿದ್ದಾರೆ. ವೈದ್ಯಕೀಯ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ.
ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿಗೆ ಆರ್ಯಭಟ ಪ್ರಶಸ್ತಿ






























































