ಯರ್ಲಪಾಡಿ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ. 18ರಂದು ಯರ್ಲಪಾಡಿ ಗ್ರಾಮದ ಕುಂಟಲ್ಪಾಡಿ ಎಂಬಲ್ಲಿ ಸಂಭವಿಸಿದೆ.
ಜೆರೋಮ್‌ ಪಿಂಟೋ (70) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಸುಮಾರು 1 ವರ್ಷದಿಂದ ಕುಂಟಲ್ಪಾಡಿಯ ಹೆರಾಲ್ಡ್‌ ಡಿಸೋಜ ಅವರ ತೋಟದ ಮನೆಯಲ್ಲಿ ವಾಸವಾಗಿದ್ದರು. ಜೆರೋಮ್‌ ಪಿಂಟೋ ಅವರು ವಿಕಲಚೇತನರಾಗಿದ್ದು, ಇವರಿಗೆ ಸಂಬಂಧಿಕರು ಯಾರು ಇಲ್ಲದೇ ಇದ್ದು, ಹೆರಾಲ್ಡ್‌ ಅವರ ತೋಟದ ಕೆಲಸವನ್ನು ಮಾಡಿಕೊಂಡಿದ್ದರು. ಮಂಗಳವಾರದಂದು ಜೆರೋಮ್‌ ಪಿಂಟೋ ಮನೆಯೊಳಗಡೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

















































error: Content is protected !!
Scroll to Top