ಮುಂಬಯಿಯ 50ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ

ಮುಂಬಯಿ: ಶಾಲೆ, ಕಾಲೇಜು, ವಿಮಾನ ನಿಲ್ದಾಣ ಆಯಿತು, ಈಗ ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಮುಂಬಯಿಯ ಜಸ್ಲೋಕ್, ರಹೇಜಾ, ಸೆವೆನ್ ಹಿಲ್ಸ್, ಕೊಹಿನೂರ್, ಕೆಇಎಂ, ಜೆಜೆ ಮತ್ತು ಸೇಂಟ್ ಜಾರ್ಜ್ ಆಸ್ಪತ್ರೆ ಸೇರಿದಂತೆ 50 ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ.

ವಿಪಿಎನ್ ನೆಟ್‌ವರ್ಕ್ ಬಳಸಿ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಲಾಗಿದೆ ಎಂದು ಮುಂಬಯಿ ಪೊಲೀಸರು ಖಚಿತಪಡಿಸಿದ್ದಾರೆ. ಇ-ಮೇಲ್‌ ಕಳುಹಿಸಿದವರ ಗುರುತು ಮತ್ತು ಬೆದರಿಕೆಯ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬಯಿಯ ಹಿಂದೂಜಾ ಕಾಲೇಜ್ ಆಫ್ ಕಾಮರ್ಸ್ ಅನ್ನು ಸ್ಫೋಟಿಸುವ ಬೆದರಿಕೆಯ ನಕಲಿ ಇ-ಮೇಲ್ ಕೂಡ ಸಂಸ್ಥೆಗೆ ಬಂದಿದೆ. ಪೊಲೀಸ್ ತಂಡಗಳು ಮತ್ತು ಬಾಂಬ್ ಸ್ಕ್ವಾಡ್ ಎರಡೂ ಸ್ಥಳಗಳಲ್ಲಿ ಸಂಪೂರ್ಣ ಶೋಧ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಇ-ಮೇಲ್ ಕಳುಹಿಸಿದ ವ್ಯಕ್ತಿಗಾಗಿ ಮುಂಬಯಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ನಿನ್ನೆ ಚೆನ್ನೈ, ಪಾಟ್ನಾ ಮತ್ತು ಜೈಪುರ ಸೇರಿದಂತೆ 41 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ತಕ್ಷಣ ಅಲರ್ಟ್‌ ಆದ ಪೊಲೀಸರು ಎಲ್ಲಾ ಕಡೆ ಶೋಧ ಕಾರ್ಯ ನಡೆಸಿದ್ದರು. ಆದರೆ ಅಂತಹ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿರಲಿಲ್ಲ.

















































error: Content is protected !!
Scroll to Top