ಕಾರ್ಕಳ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾರ್ಕಳ ಇಲ್ಲಿ 2024-25ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಕೋರ್ಸುಗಳಿಗೆ ಪ್ರವೇಶ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸೆಲ್ಸಿ ಪಾಸಾದ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
2 ವರ್ಷದ ಕೋರ್ಸ್‌ಗಳಾದ ಎಲೆಕ್ಟ್ರೀಷಿಯನ್ (20 ಸೀಟು), ಎಲೆಕ್ಟ್ರಾನಿಕ್ ಮೆಕ್ಯಾನಿಕ್ (24 ಸೀಟು), ಫಿಟ್ಟರ್ (20 ಸೀಟು), ಎಂಎಂವಿ (24 ಸೀಟು), ಎಂಆರ್‌ಎಸಿ (24 ಸೀಟು), ಮೆಕ್ಯಾನಿಕ್ ಎಲೆಕ್ಟ್ರೀಕ್ ವೆಹಿಕಲ್ (24 ಸೀಟು), ಬೇಸಿಕ್ ಡಿಸೈನರ್ ವರ್ಚುವಲ್ ವೆರಿಫಿಯರ್ (24 ಸೀಟು), ಅಡ್ವಾನ್ಸ್ಡ್ ಸಿಎನ್‌ಸಿ ಮೆಷಿನಿಂಗ್ (24) ಹಾಗೂ 1 ವರ್ಷದ ಕೋರ್ಸ್‌ಗಳಾದ ಇಂಡಸ್ಟ್ರೀಯಲ್ ರೊಬೊಸ್ಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಶೀಯನ್ (20 ಸೀಟು), ಆರ್ಟಿಸನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ (10 ಸೀಟು), ಮ್ಯಾನುಫ್ಯಾಕ್ಚರಿಂಗ್ ಪ್ರಾಸೆಸ್ ಕಂಟ್ರೋಲ್ ಮತ್ತು ಅಟೊಮೋಷನ್ (20 ಸೀಟು) ಲಭ್ಯವಿದೆ. http://www.cite.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರವೇಶಾತಿಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿಯನ್ನು ಕಾಯ್ದಿರಿಸಲಾಗಿದೆ. ಕೋರ್ಸು ಮುಗಿದ ಬಳಿಕ ವಿವಿಧ ಕಂಪನಿಗಳಲ್ಲಿ ಉದ್ಯೋಗ ಒದಗಿಸಿಕೊಡಲಾಗುವುದು. ವಾರ್ಷಿಕ ಶುಲ್ಕ ರೂ.1200 ಆಗಿದ್ದು, ತರಬೇತಿದಾರರಿಗೆ ವಿವಿಧ ಸರಕಾರಿ ಇಲಾಖೆಗಳಿಂದ ಹಾಗೂ ಖಾಸಗಿ ಸಂಸ್ಥೆಗಳಿಂದ ಸ್ಕಾಲರ್ ಶಿಪ್ ಸೌಲಭ್ಯ ಹಾಗೂ ದೂರದೂರಿನ ವಿದ್ಯಾರ್ಥಿಗಳಿಗೆ ಸರಕಾರಿ ಹಾಸ್ಟೆಲ್ ಸೌಕರ್ಯವೂ ಇದೆ. ಹೆಚ್ಚಿನ ಮಾಹಿತಿಗಾಗಿ 9480000110 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರಾದ ಕೆ. ಎಲ್. ನಾಗಾರಾಜ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.






























































